ಕೃಷಿ ಕಾಯ್ದೆ ಕಗ್ಗಂಟು; ಮೋದಿ ಮನವಿಗೆ ರೈತರು ಬಗ್ಗುತ್ತಿಲ್ಲ ಯಾಕೆ.?
ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಗಾಜಿಪುರದ ದೆಹಲಿ - ಮೇರಠ್ ಹೆದ್ದಾರಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ
ನವದೆಹಲಿ (ಜ. 31): ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಗಾಜಿಪುರದ ದೆಹಲಿ - ಮೇರಠ್ ಹೆದ್ದಾರಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 'ಆತ್ಮಹತ್ಯೆ ಬೇಕಾದ್ರೂ ಮಾಡಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಪ್ರತಿಭಟನಾ ಸ್ಥಳದಿಂದ ನಿರ್ಗಮಿಸಲ್ಲ' ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಕಣ್ಣೀರು ಹಾಕಿದ್ದು ರೈತರನ್ನು ಮತ್ತಷ್ಟು ಪ್ರೇರೇಪಿಸಿದಂತಿದೆ. ರಾಜಸ್ಥಾನ, ಉತ್ತರ ಪ್ರದೇಶ, ಉತ್ತರ ಖಂಡ, ಹರ್ಯಾಣ ಭಾಗಗಳಿಂದ ರೈತರು ತಂಡೋಪತಂಡದಿಂದ ಪ್ರತಿಭಟನೆಗೆ ಬರುತ್ತಿದ್ದಾರೆ. ಹಾಗಾದರೆ ಈ ಕಗ್ಗಂಟು ಬಗೆಹರಿಯುವ ಲಕ್ಷಣಗಳು ಇಲ್ವಾ..? ರಾಜಕೀಯ ಪಕ್ಷಗಳ ವಕ್ತಾರರು ಏನಂತಾರೆ.?