ದೇವಾಲಯದಲ್ಲಿ ಅಂಗಿ ಕಳಚುವ ಪದ್ಧತಿ ಜನಿವಾರ ಹುಡುಕುವುದಕ್ಕೆ ಜಾರಿಗೆ ಬಂದಿತ್ತಾ?
ಕೇರಳ ಸರ್ಕಾರ ದೇವಾಲಯಗಳಲ್ಲಿ ಪುರುಷರು ಅಂಗಿ ಕಳಚುವ ಪದ್ಧತಿಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ. ಈ ವಿಚಾರವು ವಿವಾದಕ್ಕೆ ಕಾರಣವಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶಿವಗಿರಿ ಸ್ವಾಮಿಗಳ ಹೇಳಿಕೆಗೆ ಸರ್ಕಾರ ಬೆಂಬಲ ವ್ಯಕ್ತಪಡಿಸಿದೆ.
ದೇವಸ್ಥಾನದೊಳಗೆ ಪುರುಷರು ಅಂಗಿ ಕಳಚಬಾರದಂತೆ. ದೇವರನಾಡಿನ ಗುಡಿಗಳಲ್ಲಿ ಸರ್ಕಾರ ಹೇಳಿದ್ದೇ ಫೈನಲ್ಲಾ? ಜನಿವಾರ ಹುಡುಕುವುದಕ್ಕೆ ಜಾರಿಗೆ ಬಂದಿತ್ತಾ ಆ ಪದ್ಧತಿ? ಕೇರಳದಲ್ಲಿ ಶುರುವಾಗಿರೋ ಸಂಚಲನಾತ್ಮಕ ತಲ್ಲಣ, ದೇಶವನ್ನೆಲ್ಲಾ ಕಾಡದೇ ಬಿಡುತ್ತಾ? ಆಸ್ತಿಕ ಜನರ ಭಾವನೆಗೆ ಧಕ್ಕೆ ತಂದಿದೆಯಾ ಆ ಒಂದು ಹೇಳಿಕೆ?
ಕೇರಳ ಸರ್ಕಾರವೇನೋ, ಶಿವಗಿರಿ ಸ್ವಾಮಿಗಳ ಹೇಳಿಕೆಗೆ ಕಂಪ್ಲೀಟ್ ಸಪೋರ್ಟ್ ಕೊಟ್ಟಿದೆ. ಅಷ್ಟೇ ಅಲ್ಲ, ದೇವಸ್ವಂ ಏನಾದ್ರೂ ಆ ರೀತಿ ನಿಯಮ ಬದಲಿಸೋದಾದ್ರೆ, ಅದಕ್ಕೆ ಅಸ್ತು ಅಂತ ಹೇಳೋಕೆ ತುದಿಗಾಲಲ್ಲಿ ನಿಂತಿದೆ. ಒಂದು ವೇಳೆ ಆ ನಿಯಮ ಜಾರಿಯಾದ್ರೆ, 3000 ದೇವಸ್ಥಾನಗಳ ವಸ್ತ್ರ ಸಂಹಿತೆಯೇ ಬದಲಾಗೋ ಸಾಧ್ಯತೆಯೂ ಇದೆ. ಅಷ್ಟಕ್ಕೂ ಈ ವಿಚಾರ ವಿವಾದ ಆಗಿದ್ದೇಕೆ?
ಕೇರಳ,ಅದು ದೇವರ ನಾಡು, ಆದ್ರೆ ಅಲ್ಲೇ ಈಗ ವಿವಾದಾತ್ಮಕ ಸಂಗತಿಯೊಂದು ಘಟಿಸ್ತಾ ಇದೆ.. ದೇವರ ದರ್ಶನಕ್ಕೆ, ಪುರುಷರು ಶರ್ಟ್ ಕಳಚಿ ಹೋಗೋ ಅವಶ್ಯಕತೆಯೇ ಇಲ್ಲ ಅಂತ, ಆ ಪದ್ಧತಿಯನ್ನೇ ರದ್ದು ಮಾಡೋಕೆ ಹೊರಟಿದೆ ಕೇರಳ ಸರ್ಕಾರ. ಅಷ್ಟಕ್ಕೂ ದೇವರ ಮುಂದೆ ಮೇಲಂಗಿ ತೆಗೆಯೋ ಪದ್ಧತಿ ಹಿಂದಿರೋ ನಿಗೂಢಾರ್ಥವೇನು?
ಕೇರಳ ಮುಖ್ಯಮಂತ್ರಿ ಆಡಿದ ಒಂದು ಮಾತು, ಇಡೀ ರಾಷ್ಟ್ರ ರಾಜಕಾರಣದಲ್ಲಿ ಒಂದು ವಿಭಿನ್ನ ವಾತಾವರಣ ಸೃಷ್ಟಿಸಿಬಿಟ್ಟಿದೆ. ಅದರಲ್ಲೂ ಮುಖ್ಯವಾಗಿ, ಬಿಜೆಪಿ ನಾಯಕರು ಇದೇ ವಿಚಾರಾನ ಮುಂದಿಟ್ಕಂಡು, ಪಿಣರಾಯಿ ಅವರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಆದ್ರೆ ವಿರೋಧಿಗಳ ಮಾತಿಗೆ ಕೇರಳ ಸಿಎಂ ಉತ್ತರ ಏನು?
ಕೇರಳದ ಪ್ರಮುಖ ಸಮಾಜ ಸುಧಾರಕ ಹಾಗೂ ಆಧ್ಯಾತ್ಮಿಕ ನಾಯಕ ಶ್ರೀ ನಾರಾಯಣ ಗುರುಗಳ ವಿಚಾರದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಹೇಳಿಕೆ, ದೊಡ್ಡ ಮಟ್ಟದ ವಿರೋಧ ಎದುರಿಸ್ತಾ ಇದೆ. ಆದ್ರೆ ಅದನ್ನ ಸಮರ್ಥಿಸಿಕೊಳ್ಳೋದಕ್ಕೆ, ಕೇರಳದ ಸರ್ಕಾರವೂ ಸನ್ನದ್ಧವಾಗಿದೆ.
ಈ ರಾಜಕೀಯ ಕಲಹ ಕೋಲಾಹಲ ಮುಂದೆ ಯಾವ ಮಟ್ಟ ತಲುಪಲಿದೆಯೋ ಹೇಳೋಕ್ಕಾಗಲ್ಲ, ಆದ್ರೆ ಸದ್ಯದ ಮಟ್ಟಿಗಂತೂ ಪಿಣರಾಯಿ ವಿಜಯನ್ ಅವರ ನಿಲುವು, ರಾಷ್ಟ್ರ ಮಟ್ಟದಲ್ಲೇ ದೊಡ್ಡದೊಂದು ಕೋಲಾಹಲ ಸೃಷ್ಟಿಸಿದೆ.