ಪತ್ರ ತಲುಪಿಸಲು 15 ಕಿಮೀ ಕಾಲ್ನಡಿಗೆ; ಈ ಪೋಸ್ಟ್ಮ್ಯಾನ್ ಸೇವೆಗೊಂದು ಸಲಾಂ.!
ಕಳೆದ 30 ವರ್ಷಗಳಿಂದ ಪ್ರತಿನಿತ್ಯ 15 ಕಿ.ಮೀ. ನಡೆದು ಪತ್ರ ವಿಲೇವಾರಿ ಮಾಡಿದ ತಮಿಳುನಾಡಿನ ಪೋಸ್ಟ್ಮ್ಯಾನ್ ಶಿವನ್ ಕಳೆದ ವಾರ ನಿವೃತ್ತಿಯಾಗಿದ್ದಾರೆ.
ಬೆಂಗಳೂರು (ಜು. 09): ಕಳೆದ 30 ವರ್ಷಗಳಿಂದ ಪ್ರತಿನಿತ್ಯ 15 ಕಿ.ಮೀ. ನಡೆದು ಪತ್ರ ವಿಲೇವಾರಿ ಮಾಡಿದ ತಮಿಳುನಾಡಿನ ಪೋಸ್ಟ್ಮ್ಯಾನ್ ಶಿವನ್ ಕಳೆದ ವಾರ ನಿವೃತ್ತಿಯಾಗಿದ್ದಾರೆ.
ಕೂನೂರು ಬಳಿಯ ಹಿಲ್ಗ್ರೋವ್ ಪೋಸ್ಟ್ ಆಫೀಸ್ನಲ್ಲಿ ಸೇವೆ ಸಲ್ಲಿಸಿದ್ದಾರೆ. ಸಿಂಗಾರ, ಮರಪಲ್ಲಂ ದಟ್ಟಾರಣ್ಯಗಳಲ್ಲಿ ದಿನನಿತ್ಯ ನಡೆದುಕೊಂಡೇ ಹೋಗುತ್ತಿದ್ದರು. ಜೀವ ಕೈಯಲ್ಲಿ ಹಿಡಿದು ಕಾಡಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಓಡಾಡುತ್ತಿದ್ದರು. ಅದೆಷ್ಟೋ ಬಾರಿ ಆನೆ, ಕರಡಿ, ಮತ್ತಿತರ ಕಾಡುಪ್ರಾಣಿಗಳೊಂದಿಗೆ ಮುಖಮುಖಿಯೂ ಆಗಿದ್ಧಾರೆ.
ಶಿವನ್ ಸೇವೆಯನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವೀಟ್ ಮೂಲಕ ಕೊಂಡಾಡಿದ್ಧಾರೆ. ಇವರ ಟ್ವೀಟ್ ಬೆನ್ನಲ್ಲೇ ನೆಟಿಜನ್ಗಳಿಂದ ಪ್ರಶಂಶೆಗಳ ಸುರಿಮಳೆ ವ್ಯಕ್ತವಾಗಿದ್ದು, ಶಿವನ್ ಹೀರೋ ಆಗಿ ಹೊರಹೊಮ್ಮಿದ್ದಾರೆ.