Asianet Suvarna News Asianet Suvarna News

ಮಹಾ ಮಜ್ಜನ: ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಸ್ತೆ ಗುಂಡಿಯಲ್ಲೇ ಸ್ನಾನ!

ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ವಿಚಿತ್ರ ಪ್ರತಿಭಟನೆ| ದೂರು ಕೊಟ್ಟರೂ ಸಮಸ್ಯೆ ಆಲಿಸದ ಅಧಿಕಾರಿಗಳು| ಪೈಪ್ ಕಟ್, ಮನೆಗೆ ನೀರು ಬರುತ್ತಿಲ್ಲ| ರಸ್ತೆ ಗುಂಡಿಯಲ್ಲಿದ್ದ ನೀರಲ್ಲೇ ಸ್ನಾನ

ಚೆನ್ನೈ[ಫೆ.07]: ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ವಿಚಿತ್ರ ಪ್ರತಿಭಟನೆಗಳನ್ನು ನಡೆಸುತ್ತಾರೆ. ರಸ್ತೆ ಗುಂಡಿಗಳು ಹೆಚ್ಚಾಗಿ, ಮಳೆಗಾಲದಲ್ಲಿ ಇದರಲ್ಲಿ ನೀರು ನಿಂತಾಗ ಗಿಡಗಳನ್ನು ರಸ್ತೆಯಲ್ಲೇ ನೆಡುವ ಮೂಲಕ ಸಾಮಾಜಿಕ ಹೋರಾಟಗಾರರು ಸರ್ಕಾರದ ಕಾಲೆಳೆಯುತ್ತಾರೆ. ತಮ್ಮ ಬೇಡಿಕೆ ಈಡೇರದಿದ್ದಲ್ಲಿ, ಸಮಸ್ಯೆ ಬಗೆಹರಿಯದಿದ್ದರೆ ಆಡಳಿತ ವರ್ಗಕ್ಕೆ ಬಿಸಿ ಮುಟ್ಟಿಸಲು ಜನ ಸಾಮಾನ್ಯರು ಇಂತಹ ಪ್ರತಿಭಟನೆ ನಡೆಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಒಂದು ಹೆಜ್ಜೆ ಮುಂದಿಟ್ಟು ರಸ್ತೆಯಲ್ಲೇ ಸ್ನಾನ ಮಾಡಿದ್ದಾನೆ.

ಬೆಳ್ಳಂಬೆಳಗ್ಗೆ ಹುಲಿ ಪ್ರತ್ಯಕ್ಷ, ಅರ್ಧ ಗಂಟೆ ರಸ್ತೆಯಲ್ಲೇ ವಾಕಿಂಗ್..!

ಹೌದು ತಮಿಳುನಾಡಿನ ತಿರಪ್ಪುರ್ ನಲ್ಲಿ ಇಂತಹ ಈ ವಿಚಿತ್ರ ಘಟನೆ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಈ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜಾಗುವ ಪೈಪ್ ಒಡೆದು ಹೋಗಿದ್ದು, ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಅಲ್ಲದೇ ರಸ್ತೆಯಲ್ಲಿ ನೀರು ಹರಿದು ಪೋಲಾಗುತ್ತಿತ್ತು. ಇದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಅದೆಷ್ಟೇ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಅಧಿಕಾರಿಗಳ ಈ ನಡೆಯಿಂದ ಬೇಸತ್ತ ವ್ಯಕ್ತಿಯೊಬ್ಬ, ಬಿಸಿ ಮುಟ್ಟಿಸಲು ಈ ನೀರು ಹರಿದು ಶೇಖರಣೆಯಾದ ಹೊಂಡಕ್ಕಿಳಿದು ರಸ್ತೆ ನಡುವೆಯೇ ಸ್ನಾನ ಮಾಡಲಾರಂಭಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಮುಂದೆ ಈ ಸಮಸ್ಯೆಗೆ ಪರಿಹಾರ ಸಿಗುತ್ತಾ? ಅಥವಾ ಈ ವ್ಯಕ್ತಿ ಪ್ರತಿಭಟನೆ ಮುಂದುವರೆಸುತ್ತಾ ಕಾಲವೇ ಉತ್ತರಿಸಬೇಕಿದೆ.

ರಸ್ತೆ ಮಾಡಿಸಿ ಕೊಡಿ ಮೋದಿ ಜೀ: ಉತ್ತರದ ನಿರೀಕ್ಷೆಯಲ್ಲಿ ಮೇಘಾನೆ ಗ್ರಾಮಸ್ಥರು!