Asianet Suvarna News Asianet Suvarna News

ಕೊರೋನಾ ವಾರಿಯರ್ಸ್ ಆಗಿ ಬದಲಾದ ತಬ್ಲೀಘಿಗಳು..!

ದೇಶದ ಸುಮಾರು 30% ಕೊರೋನಾ ಸೋಂಕಿತರಿಗೆ ತಬ್ಲೀಘಿಗಳ ನಂಟಿತ್ತು. ಇಷ್ಟು ದಿನ ವಿಲನ್ಸ್ ಆಗಿದ್ದ ತಬ್ಲೀಘಿಗಳು ಇದೀಗ ಕೊರೋನಾ ವಾರಿಯರ್ಸ್ ಆಗಿ ಬದಲಾಗಿದ್ದಾರೆ. ಕೊರೋನಾದಿಂದ ಗುಣಮುಖರಾದ ತಬ್ಲೀಘಿಗಳು ಪ್ಲಾಸ್ಮಾ ಥೆರಫಿಗೆ ತಮ್ಮ ರಕ್ತದಾನ ಮಾಡಲು ಮುಂದಾಗಿದ್ದಾರೆ. ರಕ್ತದಾನಕ್ಕೆ 129 ತಬ್ಲೀಘಿ ಸದಸ್ಯರು ಮುಂದಾಗಿದ್ದಾರೆ.

ಬೆಂಗಳೂರು(ಏ.27): ತಬ್ಲೀಘಿಗಳ ಒಂದು ಹುಚ್ಚಾಟದಿಂದಾಗಿ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಅಂತವರ ಪೈಕಿ ಕೆಲವರು ಹೀರೋಗಳಾಗಿ ಬದಲಾಗಿದ್ದಾರೆ. ಇದೀಗ ತಬ್ಲೀಘಿಗಳ ರಕ್ತವೇ ಕೊರೋನಾ ಓಡಿಸುವ ದಿವ್ಯೌಷಧವಾಗಿ ಬಳಕೆಯಾಗುತ್ತಿದೆ.

ದೇಶದ ಸುಮಾರು 30% ಕೊರೋನಾ ಸೋಂಕಿತರಿಗೆ ತಬ್ಲೀಘಿಗಳ ನಂಟಿತ್ತು. ಇಷ್ಟು ದಿನ ವಿಲನ್ಸ್ ಆಗಿದ್ದ ತಬ್ಲೀಘಿಗಳು ಇದೀಗ ಕೊರೋನಾ ವಾರಿಯರ್ಸ್ ಆಗಿ ಬದಲಾಗಿದ್ದಾರೆ. ಕೊರೋನಾದಿಂದ ಗುಣಮುಖರಾದ ತಬ್ಲೀಘಿಗಳು ಪ್ಲಾಸ್ಮಾ ಥೆರಫಿಗೆ ತಮ್ಮ ರಕ್ತದಾನ ಮಾಡಲು ಮುಂದಾಗಿದ್ದಾರೆ. ರಕ್ತದಾನಕ್ಕೆ 129 ತಬ್ಲೀಘಿ ಸದಸ್ಯರು ಮುಂದಾಗಿದ್ದಾರೆ.

ಮಾಸ್ಕ್ ಇಲ್ಲದೇ ತರಕಾರಿ ಕೊಳ್ಳಲು ಮುಗಿಬಿದ್ದ ಮೈಸೂರು ಮಂದಿ..!

ತಮಗೆ ಅಂಟಿದ್ದ ಕಳಂಕವನ್ನು ತೊಡೆದುಹಾಕಲು ತಬ್ಲೀಘಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದೆ ಬರುತ್ತಿದ್ದಾರೆ. ಕೊರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ದೇಹದ ಪ್ಲಾಸ್ಮಾವನ್ನು ತೆಗೆದು ರೋಗಿಗೆ ನೀಡಲಾಗುತ್ತೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.