ಬಾಲಿವುಡ್ ಸ್ಟಾರ್‌ಗಳಿಗೆ ಆಪತ್ಭಾಂದವ ಕನ್ನಡಿಗ ಸತೀಶ್ ಮಾನೆಶಿಂಧೆ!
ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಾಲಿವುಡ್ ತಾರೆ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಪರ ಜಾಮೀನಿಗಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿರುವ ನ್ಯಾಯವಾದಿ ಧಾರವಾಡ ಮೂಲದವರು ಎಂಬುದು ವಿಶೇಷ.
ಮುಂಬೈ(ಅ. 06): ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಾಲಿವುಡ್(Bollywood) ತಾರೆ ಶಾರುಖ್ ಖಾನ್(Shah Rukh Khan) ಅವರ ಪುತ್ರ ಆರ್ಯನ್ ಖಾನ್(Aryan Khan) ಪರ ಜಾಮೀನಿಗಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿರುವ ನ್ಯಾಯವಾದಿ ಧಾರವಾಡ(Dharwad) ಮೂಲದವರು ಎಂಬುದು ವಿಶೇಷ.
ಆರ್ಯನ್ ಖಾನ್ ಪ್ರಕರಣ ನಡೆಸುತ್ತಿರುವ ಧಾರವಾಡ ಮೂಲದ ನ್ಯಾಯವಾದಿ ಸತೀಶ ಮಾನೆಶಿಂಧೆಯವರು ಸ್ಟಾರ್ ನಟರ ಪ್ರಕರಣ ನಡೆಸುತ್ತಿರುವ ಸ್ಟಾರ್ ಅಡ್ಟೋಕೇಟ್ ಎಂದೇ ಪರಿಚಿತರಾಗಿದ್ದಾರೆ. ಸತೀಶ ಅವರು ಈ ಮೊದಲು ಸಂಜಯ ದತ್, ಸಲ್ಮಾನ್ ಖಾನ್ ಮತ್ತು ರಿಯಾ ಚಕ್ರವರ್ತಿಗೆ ಜಾಮೀನು ಕೊಡಿಸಿರುವ ಖ್ಯಾತಿಯನ್ನು ಹೊಂದಿದ್ದಾರೆ.
ಸತೀಶ್ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಕಾಂ. ಪದವಿ ಮುಗಿಸಿ ನಂತರ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ನಂತರ ಮುಂಬೈನಲ್ಲಿ ರಾಮ ಜೇಠ್ಮಲಾನಿ ಬಳಿ ಹತ್ತು ವರ್ಷ ಪ್ರಾಕ್ಟಿಸ್ ಮಾಡಿರುವ ಸತೀಶ್ ಮಾನಶಿಂಧೆ, ಬಳಿಕ ಪೂರ್ಣ ಪ್ರಮಾಣದ ವಕೀಲರಾದರು.