Asianet Suvarna News Asianet Suvarna News

Uttar Pradesh Elections: ಇದು ಪಂಚರಾಜ್ಯ ಚುನಾವಣೆಯಲ್ಲ, ಏಕರಾಜ್ಯ ಚುನಾವಣೆ!

ಯೋಗಿ ಇಲ್ಲದೇ ಮೋದಿ ಇಲ್ಲ, ಮೋದಿ ಇಲ್ಲದೇ ಯೋಗಿ ಇಲ್ಲ. ಯುಪಿ ಯುದ್ಧ ಭೂಮಿಯಲ್ಲಿ ಮೋದಿ- ಯೋಗಿಯ ಪ್ರತಿಷ್ಠೆಯ ಅಸ್ತಿತ್ವ. ಉತ್ತರದ ಗೆಲುವು ಲೋಕವಿಜಯ. 

ಲಕ್ನೋ(ಜ.23): ಯೋಗಿ ಇಲ್ಲದೇ ಮೋದಿ ಇಲ್ಲ, ಮೋದಿ ಇಲ್ಲದೇ ಯೋಗಿ ಇಲ್ಲ. ಯುಪಿ ಯುದ್ಧ ಭೂಮಿಯಲ್ಲಿ ಮೋದಿ- ಯೋಗಿಯ ಪ್ರತಿಷ್ಠೆಯ ಅಸ್ತಿತ್ವ. ಉತ್ತರದ ಗೆಲುವು ಲೋಕವಿಜಯ. 

ಪಂಚರಾಜ್ಯ ಚುನಾವಣೆ ಕಾವು ಎರ್ರಾಬಿರ್ರಿ ಏರಿದೆ. ಮದಗಜಗಳಂತೆ ಸಜ್ಜಾಗಿರುವ ರಾಜಕೀಯ ದಿಗ್ಗಜರು ನೇರಾ ನೇರಾ ಪೈಪೋಟಿ ಕೊಟ್ಟು ವಿರೋಧಿಗಳನ್ನು ಕುಟ್ಟಿ ಕೆಡವಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿ ಕಾಯ್ತಿದ್ದಾರೆ. ಇದನ್ನು ಪಂಚರಾಜ್ಯ ಚುನಾವಣಾ ಕಾವು ಎಂದು ಕರೆಯಬಹುದಾದರೂ ಇದನ್ನು ಪಂಚರಾಜ್ಯಕ್ಕಿಂತ ಹೆಚ್ಚಾಗಿ ಏಕರಾಜಕೀಯ ಚುನಾವಣೆ ಎನ್ನಲಾಗುತ್ತಿದೆ. ಆ ರಾಜ್ಯವೇ ಉತ್ತರ ಪ್ರದೇಶ.

Video Top Stories