Asianet Suvarna News Asianet Suvarna News

ಸುವರ್ಣ ನ್ಯೂಸ್ ಬಿಗ್‌-3ಗೆ ರಾಷ್ಟ್ರಮಟ್ಟದ ENBA ಪ್ರಶಸ್ತಿ

ಸುವರ್ಣ ನ್ಯೂಸ್ ಮುಕುಟಕ್ಕೆ ಮತ್ತೊಂದು ಗರಿ/  ಎಕ್ಸ್'ಚೇಂಜ್ ಫಾರ್ ಮೀಡಿಯಾ ಕೊಡಮಾಡುವ ಕರೆಂಟ್ ಅಫೇರ್ಸ್ ವಿಭಾಗದ ರನ್ನರ್ ಅಪ್ ಪ್ರಶಸ್ತಿ/ ಬಿಗ್-3 ಮುಡಿಗೆ ಪ್ರಶಸ್ತಿ

ಬೆಂಗಳೂರು(ಫೆ.22): ಸುವರ್ಣ ನ್ಯೂಸ್ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಎಕ್ಸ್ಚೇಂಜ್ ಫಾರ್ ಮೀಡಿಯಾ ಕೊಡಮಾಡುವ ಕರೆಂಟ್ ಅಫೇರ್ಸ್ ವಿಭಾಗದ ರನ್ನರ್ ಅಪ್ ಪ್ರಶಸ್ತಿ ಸುವರ್ಣ ನ್ಯೂಸ್ ಗೆ ದೊರೆತಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ.

ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾದ ಸುವರ್ಣ ನ್ಯೂಸ್

ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಪ್ರಶಸ್ತಿ ಸ್ವೀಕಾರ ಮಾಡಿದರು. ಸುವರ್ಣ ನ್ಯೂಸ್.ಕಾಂ ಪ್ರಧಾನ ಸಂಪಾದಕ ಎಸ್‌.ಕೆ.ಶಾಮಸುಂದರ ಮುಖ್ಯ ಭಾಷಣಕಾರರಾಗಿ ವಿಚಾರ ಹಂಚಿಕೊಂಡರು.  ಜೆಪಿ ಖ್ಯಾತಿಯ ಜಯಪ್ರಕಾಶ ಶೆಟ್ಟಿ ನಡೆಸಿಕೊಡುವ ಬಿಗ್-3 ಕಾರ್ಯಕ್ರಮಕ್ಕೆ ಪುರಸ್ಕಾರ ದೊರೆತಿದೆ.