Asianet Suvarna News Asianet Suvarna News

ಅಮೋಘ ಸಂಕಲ್ಪ, ಪುಲ್ವಾಮಾ ಹುತಾತ್ಮನ ಪತ್ನಿಗೆ ಲೆಫ್ಟಿನೆಂಟ್‌ ಹುದ್ದೆ!

ಪತಿಯ ವೀರ ಮರಣ, ಪತ್ನಿಯ ಅಮೋಘ ಸಂಕಲ್ಪ. ದೇಶಪ್ರೇಮಿಗಳು ಈ ಸುದ್ದಿಯನ್ನು ನೋಡ್ಲೇಬೇಕು. ಮದುವೆಯಾದ ಒಂಭತ್ತೇ ತಿಂಗಳಿಗೆ ಪತಿ ಹುತಾತ್ಮ, ಸೇನೆ ಸೇರಲು ಆ ಹೆಣ್ಮಗಳು ಮಾಡಿದ್ದು ಅದೆಂತಹ ಸಾಹಸ ಗೊತ್ತಾ? ಹೆಜ್ಜೆ ಹೆಜ್ಜೆಗೂ ಸವಾಲು. ಪುಲ್ವಾಮಾ ಬೆಂಕಿಯಲ್ಲಿ ನೊಂದು ಬೆಂದ ವೀರ ವನಿತೆಯ ವೀರಗಾಥೆ. 

ನವದೆಹಲಿ(ಜೂ.01): ಪತಿಯ ವೀರ ಮರಣ, ಪತ್ನಿಯ ಅಮೋಘ ಸಂಕಲ್ಪ. ದೇಶಪ್ರೇಮಿಗಳು ಈ ಸುದ್ದಿಯನ್ನು ನೋಡ್ಲೇಬೇಕು. ಮದುವೆಯಾದ ಒಂಭತ್ತೇ ತಿಂಗಳಿಗೆ ಪತಿ ಹುತಾತ್ಮ, ಸೇನೆ ಸೇರಲು ಆ ಹೆಣ್ಮಗಳು ಮಾಡಿದ್ದು ಅದೆಂತಹ ಸಾಹಸ ಗೊತ್ತಾ? ಹೆಜ್ಜೆ ಹೆಜ್ಜೆಗೂ ಸವಾಲು. ಪುಲ್ವಾಮಾ ಬೆಂಕಿಯಲ್ಲಿ ನೊಂದು ಬೆಂದ ವೀರ ವನಿತೆಯ ವೀರಗಾಥೆ. 

ಪುಲ್ವಾಮಾ ವೀರನ ಪತ್ನಿ ನಿಕಿತಾ ಸೇನೆಗೆ ಸೇರ್ಪಡೆ: ಮಾತು ಕೇಳಿ ಭಾವುಕರಾದ ನೆಟ್ಟಿಗರು!

ದೇಶಪ್ರೇಮ ಎಂಬುವುದು ಅದೆಂತಹಾ ಅಮಲೆಂದರೆ ಜೀವ ಕೊಡಲೂ ಅಂಜಿಕೊಳ್ಳುವುದಿಲ್ಲ. ಅದರಲ್ಲೂ ಗಡಿ ಕಾಯುವ ದೇವರು ಎಂದೇ ಕರೆಸಿಕೊಳ್ಳುವ ನಮ್ಮ ಭಾರತೀಯ ಸೇನೆಯ ಯೋಧರು ಒಂದೇ ಒಂದು ಕ್ಷಣವೂ ತಮ್ಮ ಪ್ರಾಣದ ಬಗ್ಗೆ ಯೋಚಿಸುವುದದಿಲ್ಲ. ಅವರಿಗೆ ಗೊತ್ತಿರೋದು ಒಂದೇ, ನಮ್ಮ ದೇಶವನ್ನು ಶತ್ರುಗಳಿಂದ ರಕ್ಷಿಸ್ಬೇಕು ಹಾಗೂ ಎದುರಾಳಿಗಳನ್ನು ರುಂಡವನ್ನಯ ಚೆಂಡಾಡುವುದು ಹಾಗೂ ಸಮಯ ಬಂದ್ರೆ ಹುತಾತ್ಮರಾಗೋದು.

ಪುಲ್ವಾಮಾ ಹುತಾತ್ಮ ಮೇ| ದೌಂಡಿಯಾಲ್ ಪತ್ನಿ ನಿಖಿತಾ ಭಾರತೀಯ ಸೇನೆಗೆ ಸೇರ್ಪಡೆ!

ಶತ್ರುಗಳ ನಿದ್ದೆ ಹಾಳು ಮಾಡಿದ ಭಾರತಾಂಬೆಯ ಹೆಮ್ಮೆಯ ಪುತ್ರನೊಬ್ಬ ಹೀಗೇ ಹೋರಾಡುವಾಗ ವೀರ ಮರಣವನ್ನಪ್ಪುತ್ತಾನೆ. ಆದರೆ ಅಲ್ಲಿಗೇ ಆತನ ದೇಶಸೇವೆಡ ಕೊನೆಯಾಗುತ್ತಲ್ಲಾ ಎಂದು ಆಲೋಚಿಸಿ ತನ್ನ ಪತಿಯಂತೆ ತಾನೂ ಸೇನಾ ಸಮವಸ್ತ್ರದಲ್ಲಿ ಭಾರತೀಯ ಗಡಿ ಕಾಯಬೇಕು ಎಂದು ಮಹಿಳೆಯೊಬ್ಬಳು ಸಂಕಲ್ಪ ಮಾಡುತ್ತಾಳೆ. ಇಲ್ಲಿದೆ ನೋಡಿ ನಿಕಿತಾ ಕೌಲ್‌ ಸಾಹಸಗಾಥೆ. 

Video Top Stories