Asianet Suvarna News Asianet Suvarna News

ವೈದ್ಯ ಲೋಕಕ್ಕೂ ಸವಾಲಾಗಿದೆ ಹೊಸ ರೂಪಾಂತರಿ ವೈರಸ್!

ಬಿಟ್ಟೂ ಬಿಡದೇ ಕಾಡ್ತಿದೆ ಕೊರೋನಾ ರೂಪಾಂತರಿ ವೈರಸ್. ಆದರೀಗ ಜಗತ್ತಿಗೇ ತಲೆನೋವಾಯ್ತು ಡೆಲ್ಟಾ ಪ್ಲಸ್ ಅನ್ನೋ ವೈರಾಣು. ಯುರೋಪ್, ಫ್ರಾನ್ಸ್ ಜಿಂಬಾಬ್ವೆ ಎಲ್ಲಾ ಕಡೆ ಶುರುವಾಗಿದೆ ಡೆಲ್ಟಾ ಪ್ಲಸ್ ಆರ್ಭಟ. ಭಾರತಕ್ಕೂ ಶುರುವಾಯ್ತು ಢವ ಢವ. ಶೇ. 60ಕ್ಕೂ ಹೆಚ್ಚು ವೇಗದಲ್ಲಿ ಹರಡುತ್ತಿದೆ ಹೊಸ ಯಮರೂಪಿ ಮೂರನೇ ಅಲೆಗೆ ಭಯಾನಕ ಸ್ಕೆಚ್ ಹಾಕಿದೆಯಾ? ಮುಂದೆ ದೊಡ್ಡ ಅನಾಹುತ ಕಾದಿದೆಯಾ? 

ನವದೆಹಲಿ(ಜೂ.16): ಬಿಟ್ಟೂ ಬಿಡದೇ ಕಾಡ್ತಿದೆ ಕೊರೋನಾ ರೂಪಾಂತರಿ ವೈರಸ್. ಆದರೀಗ ಜಗತ್ತಿಗೇ ತಲೆನೋವಾಯ್ತು ಡೆಲ್ಟಾ ಪ್ಲಸ್ ಅನ್ನೋ ವೈರಾಣು. ಯುರೋಪ್, ಫ್ರಾನ್ಸ್ ಜಿಂಬಾಬ್ವೆ ಎಲ್ಲಾ ಕಡೆ ಶುರುವಾಗಿದೆ ಡೆಲ್ಟಾ ಪ್ಲಸ್ ಆರ್ಭಟ. ಭಾರತಕ್ಕೂ ಶುರುವಾಯ್ತು ಢವ ಢವ. ಶೇ. 60ಕ್ಕೂ ಹೆಚ್ಚು ವೇಗದಲ್ಲಿ ಹರಡುತ್ತಿದೆ ಹೊಸ ಯಮರೂಪಿ ಮೂರನೇ ಅಲೆಗೆ ಭಯಾನಕ ಸ್ಕೆಚ್ ಹಾಕಿದೆಯಾ? ಮುಂದೆ ದೊಡ್ಡ ಅನಾಹುತ ಕಾದಿದೆಯಾ? 

ಭಾರತಲ್ಲಿ ಕೊರೋನಾ ಎರಡನೇ ಅಲೆಗೆ ‘ಡೆಲ್ಟಾ’ ತಳಿಯ ರೂಪಾಂತರಿ ಕೊರೋನಾ ವೈರಸ್‌ ಕಾರಣವಾಗಿದೆ ಎಂದು ಇತ್ತೀಚೆಗೆ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ‘ಡೆಲ್ಟಾಪ್ಲಸ್‌ ಅಥವಾ ‘ಎವೈ.1’ ಎಂಬ ರೂಪಾಂತರಿ ಕೊರೋನಾ ವೈರಸ್‌ ತಳಿ ಪತ್ತೆಯಾಗಿದ್ದು ಆತಂಕ ಸೃಷ್ಟಿಸಬಹುದಾಗಿದೆ. ಆದರೆ ಈಗಿನ ಮಟ್ಟಿಗೆ ಈ ಬಗ್ಗೆ ಗಾಬರಿ ಪಡಬೇಕಿಲ್ಲ. ಏಕೆಂದರೆ ಈವರೆಗೆ ಇದು ಹೆಚ್ಚಾಗಿ ಸೋಂಕಿತರಲ್ಲಿ ಪತ್ತೆಯಾಗಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

‘ಬಿ.1.617.2’ ಅಥವಾ ‘ಡೆಲ್ಟಾ’ ಎಂದು 2ನೇ ಅಲೆಗೆ ಕಾರಣವಾದ ವೈರಾಣುವಿಗೆ ವಿಶ್ವ ಆರೋಗ್ಯ ಸಂಸ್ಥೆ ಹೆಸರಿಟ್ಟಿತ್ತು. ಈಗ ‘ಬಿ.1.617.2.1’ ಅಥವಾ ‘ಡೆಲ್ಟಾಪ್ಲಸ್‌’ ಅಥವಾ ‘ಎವೈ.1’ ಎಂದು ಹೊಸ ವೈರಾಣುವಿಗೆ ನಾಮಕರಣ ಮಾಡಲಾಗಿದೆ. ಇದೂ ಕೂಡ ತುಂಬಾ ಸೋಂಕುಕಾರಕವಾಗಬಲ್ಲುದಾಗಿದೆ. ರೋಗನಿರೋಧಕ ಶಕ್ತಿಯನ್ನು ಭೇದಿಸಬಲ್ಲುದಾಗಿದೆ ಎಂದು ದಿಲ್ಲಿ ಸಿಎಸ್‌ಐಆರ್‌ ಜೆನೋಮಿಕ್‌ ಇನ್ಸ್‌ಟಿಟ್ಯೂಟ್‌ನ ತಜ್ಞ ವಿನೋದ್‌ ಸ್ಕಾರಿಯಾ ಹೇಳಿದ್ದಾರೆ.

Video Top Stories