Asianet Suvarna News Asianet Suvarna News

ಗ್ಯಾನವಾಪಿ ಮಸೀದಿ ಸಮೀಕ್ಷೆಗೆ ತಡೆ ನೀಡಲು ಸುಪ್ರೀಂ ನಕಾರ, ಅರ್ಜಿ ವಿಚಾರಣಾ ಪಟ್ಟಿಗೆ ಸೇರಿಸಲು ಸಮ್ಮತಿ

ಉತ್ತರ ಪ್ರದೇಶದ ವಾರಾಣಸಿಯಲ್ಲಿನ ಗ್ಯಾನವಾಪಿ ಮಸೀದಿ-ಶೃಂಗಾರ ಗೌರಿ ದೇಗುಲದ ಸಮೀಕ್ಷೆ ನಡೆಸುವುದಕ್ಕೆ ತಡೆ ನೀಡಲು ಸುಪ್ರೀಂ ಕೋರ್ಚ್‌ ಶುಕ್ರವಾರ ನಿರಾಕರಿಸಿದೆ. ಆದರೆ ಸಮೀಕ್ಷೆ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣಾ ಪಟ್ಟಿಗೆ ಸೇರಿಸಲು ಸಮ್ಮತಿಸಿದೆ.

May 14, 2022, 10:43 AM IST

ನವದೆಹಲಿ(ಮೇ.14): ಉತ್ತರ ಪ್ರದೇಶದ ವಾರಾಣಸಿಯಲ್ಲಿನ ಗ್ಯಾನವಾಪಿ ಮಸೀದಿ-ಶೃಂಗಾರ ಗೌರಿ ದೇಗುಲದ ಸಮೀಕ್ಷೆ ನಡೆಸುವುದಕ್ಕೆ ತಡೆ ನೀಡಲು ಸುಪ್ರೀಂ ಕೋರ್ಚ್‌ ಶುಕ್ರವಾರ ನಿರಾಕರಿಸಿದೆ. ಆದರೆ ಸಮೀಕ್ಷೆ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣಾ ಪಟ್ಟಿಗೆ ಸೇರಿಸಲು ಸಮ್ಮತಿಸಿದೆ.

ಇದರ ನಡುವೆಯೇ ಶನಿವಾರದಿಂದ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲೇ ಇರುವ ಗ್ಯಾನವಾಪಿ ಮಸೀದಿ ವಿಡಿಯೋ ಸಮೀಕ್ಷೆಯನ್ನು ವಾರಾಣಸಿ ಕೋರ್ಚ್‌ ನೇಮಿತ ಮೂವರು ಕಮಿಷ್ನರ್‌ಗಳು ಆರಂಭಿಸಲಿದ್ದಾರೆ. ಹೀಗಾಗಿ ಕಾಶಿಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಕಾಶಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಆದರೆ ವಾರಾಣಸಿ ಕೋರ್ಚ್‌ ಆದೇಶದ ವಿರುದ್ಧ ಮಸೀದಿ ಆಡಳಿತ ಮಂಡಳಿ ರಾಜ್ಯ ಹೈಕೋರ್ಚ್‌ ಮೊರೆ ಹೋಗುವ ಸಾಧ್ಯತೆ ಇದೆ.

ತಡೆಗೆ ಮೊರೆ:

ಸಮೀಕ್ಷೆ ವಿರುದ್ಧ ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಚ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಶುಕ್ರವಾರ ಸಂಘಟನೆಗಳ ಪರ ಹಿರಿಯ ನ್ಯಾಯವಾದಿ ಹುಫೇಜಾ ಅಹ್ಮದಿ ವಾದ ಮಂಡಿಸಿದರು. ‘ಗ್ಯಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಸಮೀಕ್ಷೆಗೆ ವಾರಾಣಸಿ ನ್ಯಾಯಾಲಯ ನೀಡಿದ ಆದೇಶಕ್ಕೆ ತಡೆ ನೀಡಬೇಕು. ಪೂಜಾ ಸ್ಥಳ ಕಾಯ್ದೆ ಪ್ರಕಾರ ಇದು ಅನಾದಿ ಕಾಲದಿಂದ ಮಸೀದಿ ಎಂದು ನಮೂದಿಸಲ್ಪಟ್ಟಿದೆ. ಹೀಗಾಗಿ ಅದರ ಸ್ವರೂಪವನ್ನು ಕಾಯ್ದೆ ಪ್ರಕಾರ ಬದಲಿಸಬಾರದು’ ಎಂದು ಕೋರಿದರು.