Asianet Suvarna News Asianet Suvarna News

ಮೇ 17 ರ ಬಳಿಕ ಮೃದು ಲಾಕ್‌ಡೌನ್‌ ಜಾರಿ ಸಂಭವ; ಕುತೂಹಲ ಮೂಡಿಸಿದೆ ಮೋದಿ ಭಾಷಣ

ಕೊರೋನಾ ನಿಗ್ರಹಕ್ಕಾಗಿ ದೇಶದಲ್ಲಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ ಬರುವ ಭಾನುವಾರ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆ ಕುರಿತು ಮೇ 15ರೊಳಗೆ ವಿಸ್ತೃತ ಸಲಹೆ ರವಾನಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.

ಬೆಂಗಳೂರು (ಮೇ. 12): ಕೊರೋನಾ ನಿಗ್ರಹಕ್ಕಾಗಿ ದೇಶದಲ್ಲಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ ಬರುವ ಭಾನುವಾರ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆ ಕುರಿತು ಮೇ 15ರೊಳಗೆ ವಿಸ್ತೃತ ಸಲಹೆ ರವಾನಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.

ಮೊದಲ ಹಂತದ ಲಾಕ್‌ಡೌನ್‌ ವೇಳೆ ಅಗತ್ಯವಿದ್ದ ಕ್ರಮಗಳು 2ನೇ ಹಂತದಲ್ಲಿ ಅವಶ್ಯವಿರಲಿಲ್ಲ. ಅದೇ ರೀತಿ, 3ನೇ ಹಂತಕ್ಕೆ ಅಗತ್ಯವಿರುವ ಅಗತ್ಯಗಳು ನಾಲ್ಕನೇ ಅಂತ್ಯಕ್ಕೆ ಅವಶ್ಯವಿರುವುದಿಲ್ಲ ಎಂದು ಮೋದಿ ಅವರು ಹೇಳಿದರು.

5 ರಾಜ್ಯಗಳಿಂದಷ್ಟೇ ಲಾಕ್‌ಡೌನ್ ವಿಸ್ತರಣೆಗೆ ಬೆಂಬಲ..!

ತನ್ಮೂಲಕ ಮೇ 17ರ ನಂತರ ಲಾಕ್‌ಡೌನ್‌ ವಿಸ್ತರಣೆಯಾಗುವ ಹಾಗೂ ನಿರ್ಬಂಧಗಳು ಸಡಿಲಿಕೆಯಾಗುವ ಕುರಿತು ಅತ್ಯಂತ ಸ್ಪಷ್ಟಸುಳಿವನ್ನು ನೀಡಿದರು. ಮೂಲಗಳ ಪ್ರಕಾರ, ಮೇ 17ರ ನಂತರ ಕಂಟೈನ್ಮೆಂಟ್‌ ವಲಯಗಳಲ್ಲಿ ಲಾಕ್‌ಡೌನ್‌ ಮುಂದುವರಿಯಲಿದೆ. ಆದರೆ ಇತರೆಡೆ ನಿರ್ಬಂಧಗಳು ಮತ್ತಷ್ಟುಸಡಿಲವಾಗುವ ಸಾಧ್ಯತೆ ಇದೆ.

 

Video Top Stories