Asianet Suvarna News Asianet Suvarna News

ಸ್ವಾತಂತ್ರ್ಯ ವೀರರ ಫೋಟೋ ತೆರವು ಮಾಡಿ ಎಸ್‌ಡಿಪಿಐ ಪುಂಡಾಟ!

ಸ್ವಾತಂತ್ರ್ಯ ವೀರರ ಫೋಟೋ ತೆರೆವು ಮಾಡಿದ ಘಟನೆ ಹೊರತು ಪಡಿಸಿದರೆ ಕರ್ನಾಟಕದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ, ಸಿದ್ದ ಹಾಗೂ ಪ್ರತಾಪ್ ಸಿಂಹ ವಾಕ್ಸಮರ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ. 

Aug 13, 2022, 10:45 PM IST

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಹಿನ್ನಲೆಯಲ್ಲಿ ಮಾಲ್ ಒಂದರಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪುಂಡಾಟ ನಡೆಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸ್ವಾತಂತ್ರ್ಯ ವೀರರ ಫೋಟೋಗಳನ್ನು ತೆರವುಗೊಳಿಸಿದ ಪುಂಡಾಟ ಮೆರೆದಿದ್ದಾರೆ. ಮುಸ್ಲಿಮ್ ಹೋರಾಟಗಾರರ ಫೋಟೋ ಯಾಕಿಲ್ಲ, ವೀರ ಸಾವರ್ಕರ್ ಫೋಟೋ ಯಾಕೆ ಎಂದು ತಗಾದೆ ತೆಗೆದು ರಂಪಾಟ ಮಾಡಿದ್ದಾರೆ. ಇತ್ತ ದೇಶಾದ್ಯಂತ ಹರ್ ಘರ್ ತಿರಂಗ ಸಡಗರ ಮನೆ ಮಾಡಿದೆ. ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸ ಸಂಭ್ರಮದಲ್ಲಿರುವ ಭಾರತ ಇಂದು ಹರ್ ಘರ್ ತಿರಂಗ ಅಭಿಯಾನಕ್ಕೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವರು ಹರ್ ಘರ್ ತಿರಂಗ ಅಭಿಯಾನಕ್ಕೆ ಕೈಜೋಡಿಸಿ ತಿರಂಗ ಹಾರಿಸಿದ್ದಾರೆ.