Asianet Suvarna News Asianet Suvarna News

ಶ್ರೇಷ್ಠ ಭಾರತ ನಿರ್ಮಾಣಕ್ಕೆ ರಾಷ್ಟ್ರವಾದ ಅಗತ್ಯ, ಸ್ವಾತಂತ್ರ್ಯ ದಿನಾಚರಣೆಗೆ ಸದ್ಗುರು ಸಂದೇಶ!

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿರುವ ಭಾರತೀಯರಿಗೆ ಸದ್ಗುರು ಜಗ್ಗಿವಾಸುದೇವ್ ಮಹತ್ವದ ಸಂದೇಶ ಸಾರಿದ್ದಾರೆ. ಕಳೆದ 75 ವರ್ಷದಲ್ಲಿ ಭಾರತ ನಡೆದು ಬಂದ ಹಾದಿ, ಮುಂದೆ ಭಾರತೀಯರು ಮಾಡಬೇಕಾದ ಕರ್ತವ್ಯ ಸೇರಿದಂತೆ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ.

Aug 14, 2022, 7:02 PM IST

ಭಾರತ ಅಜಾದಿ ಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಕಳೆದ 75 ವರ್ಷದಲ್ಲಿ ಭಾರತ ಸಾಕಷ್ಟು ಪ್ರಗತಿಯಾಗಿದೆ. ಸಾಕ್ಷರತೆ, ಶಿಕ್ಷಣ, ಆರ್ಥಿಕತೆ, ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ರಂಗದಲ್ಲೂ ಪ್ರಗತಿಯಾಗಿದೆ. ಭಾರತ ಮತ್ತಷ್ಟು ಬಲಿಷ್ಠವಾಗಿ ಮುನ್ನಡೆಯಲು, ಒಗ್ಗಟ್ಟಿನಿಂದ ಇರಲು ಬಲವಾದ ರಾಷ್ಟ್ರವಾದ ಅಗತ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಆಕ್ರಮಣಕಾರಿ ರಾಷ್ಟ್ರವಾದದ ಅಗತ್ಯತೆ ಇತ್ತು. 60ರ ದಶಕದಲ್ಲಿ ಇದರ ಸ್ವರೂಪ ಬದಲಾಯಿತು. ಈಗ ಬೇರೊಂದ ರೂಪ. ಆದರೆ ಹಲವು ಭಾಷೆ, ಧರ್ಮ, ರಾಜ್ಯ, ಪ್ರಾಂತ್ಯ, ಆಚರಣೆ, ಸಂಪ್ರದಾಯ ಹೊಂದಿರುವ ಭಾರತ ಏಕತೆಯಿಂದ, ಐಕ್ಯದಿಂದ ಇರಲು ಬಲವಾದ ರಾಷ್ಟ್ರವಾದ ಅಗತ್ಯ ಎಂದು ಸದ್ಗುರು ಜಗ್ಗಿವಾಸುದೇವ್ ಹೇಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗ ಸದ್ಗುರು ಮಹತ್ವದ ಸಂದೇಶ ಸಾರಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ.