ರಷ್ಯಾದಲ್ಲಿ ಸೆರೆಯಾದ ಐಸಿಸ್ ಉಗ್ರನಿಂದ ಸ್ಫೋಟಕ ಮಾಹಿತಿ! ಬಿಜೆಪಿ ನಾಯಕರೇ ಟಾರ್ಗೆಟ್!
ರಷ್ಯಾದಲ್ಲಿ ಉಗ್ರನ ಬಂಧಿಸಿ ವಿಚಾರಣೆ ನಡೆಸುವಾಗ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಈತ ಭಾರತದ ಬಿಜೆಪಿ ನಾಯಕರ ಮೇಲೆ ಆತ್ಮಾಹುತಿ ದಾಳಿ ಮಾಡಲು ಪ್ಲಾನ್ ಮಾಡಿರುವುದು ಬಹಿರಂಗವಾಗಿದೆ.
ಭಾರತದ ಬಿಜೆಪಿ ನಾಯಕರ ಮೇಲೆ ಆತ್ಮಾಹುತಿ ದಾಳಿಗೆ ಘಜ್ವಾ ಇ ಹಿಂದ್ ಉಗ್ರರು ಪ್ಲಾನ್ ಮಾಡಿರುವ ಸ್ಫೋಟಕ ಮಾಹಿತಿ ಬಹಿರಂಗೊಂಡಿದೆ. ರಷ್ಯಾದಲ್ಲಿ ಈ ಉಗ್ರನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಈತ ಭಾರತ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಈತ ಭಾರತದಿಂದ ರಷ್ಯಾಗೆ ತೆರಳಿದ್ದ. ಪ್ರವಾದಿ ಅವಹೇಳನಕ್ಕೆ ಸೇಡು ತೀರಿಸಿಕೊಳ್ಳಲು ಆತ್ಮಾಹುತಿ ದಾಳಿಗೆ ಈತ ಪ್ಲಾನ್ ಮಾಡಿಕೊಂಡಿದ್ದ. 57 ಸೆಕೆಂಡ್‌ಗಳ ತಪ್ಪೊಪ್ಪಿಗೆ ನೀಡಿರುವ ವಿಡಿಯೋವನ್ನು ರಷ್ಯಾ ಪೊಲೀಸರು ಬಹಿರಂಗ ಪಡಿಸಿದೆ.