Asianet Suvarna News Asianet Suvarna News

ಆಪರೇಷನ್ ಏರ್‌ಲಿಫ್ಟ್: ಮೊದಲ ಹಂತದಲ್ಲಿ 15 ಸಾವಿರ ಜನರು ಸ್ವದೇಶಕ್ಕೆ ವಾಪಸ್

 ವಿವಿಧ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ 10,823 ಮಂದಿಯನ್ನು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಮಂಗಳೂರು ನಗರಗಳಲ್ಲೇ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಸೋಂಕು ನೆಗೆಟಿವ್‌ ಬಂದರೆ ಮಾತ್ರ ಬೇರೆ ಜಿಲ್ಲೆಗಳಲ್ಲಿರುವ ಅವರ ನಿವಾಸಗಳಿಗೆ ಕಳುಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
 

ಬೆಂಗಳೂರು (ಮೇ. 06): ವಿವಿಧ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ 10,823 ಮಂದಿಯನ್ನು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಮಂಗಳೂರು ನಗರಗಳಲ್ಲೇ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಸೋಂಕು ನೆಗೆಟಿವ್‌ ಬಂದರೆ ಮಾತ್ರ ಬೇರೆ ಜಿಲ್ಲೆಗಳಲ್ಲಿರುವ ಅವರ ನಿವಾಸಗಳಿಗೆ ಕಳುಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ವಲಸಿಗರಿಗೆ ಬೆಂಗ್ಳೂರು, ಮಂಗ್ಳೂರಲ್ಲಿ ಕ್ವಾರಂಟೈನ್

ವಿಮಾನ ನಿಲ್ದಾಣದಿಂದ ಇಳಿದು ಕ್ವಾರಂಟೈನ್‌ಗೆ ಹೋಗುವ ವೇಳೆಗೆ ಎಲ್ಲರೂ ತಮ್ಮ ಮೊಬೈಲ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಹೋಂ ಕ್ವಾರಂಟೈನ್‌ಗೆ ಹೋಗುವವರು ಕೊರೋನಾ ವಾಚ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಹಗಲಿನ ವೇಳೆ ಪ್ರತಿ ಒಂದು ಗಂಟೆಗೊಮ್ಮೆ ಫೋಟೋ ಅಪ್‌ಲೋಡ್‌ ಮಾಡಬೇಕು ಎಂದು ತಿಳಿಸಿದೆ.