Asianet Suvarna News Asianet Suvarna News

Omicron Variant: 13 ದೇಶಕ್ಕೆ ವ್ಯಾಪಿಸಿದ ಒಮಿಕ್ರೋನ್‌ ವೈರಸ್‌, WHO ಎಚ್ಚರಿಕೆ

- ಜಗತ್ತಿಗೇ ಒಮಿಕ್ರೋನ್‌ ಕಂಟಕ. ಹಳ ಅಪಾಯಕಾರಿ ತಳಿ ಇದು

ಈ ಸೋಂಕು ಹರಡಿದರೆ ಪರಿಣಾಮ ಅತ್ಯಂತ ಗಂಭೀರ: ಡಬ್ಲ್ಯುಎಚ್‌ಒ

- ಸೋಂಕು ಹತ್ತಿಕ್ಕಲು ತಕ್ಷಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ

 

ಬೆಂಗಳೂರು (ನ. 30): ವಿಶ್ವದ ನಿದ್ರೆಗೆಡಿಸಿರುವ ಒಮಿಕ್ರೋನ್‌ ರೂಪಾಂತರಿ (Omicron Variant) ಡೆಲ್ಟಾತಳಿಗಿಂತ ವೇಗವಾಗಿ ಹರಡುತ್ತದೆಯೇ? ಸೋಂಕು ತಗುಲಿದರೆ ರೋಗ ಗುಣಲಕ್ಷಣಗಳು ತೀವ್ರವಾಗಿರುತ್ತವೆಯೇ ಎಂಬುದರ ಕುರಿತು ಅಧ್ಯಯನ ನಡೆಯಬೇಕಾದ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

Hassan: 2 ತಿಂಗಳಲ್ಲಿ 23 ಮಂದಿ ಕೊರೋನಾಗೆ ಬಲಿ, 21 ಮಂದಿ ವ್ಯಾಕ್ಸಿನ್ ಪಡೆದಿರಲಿಲ್ಲ!

ಒಮಿಕ್ರಾನ್‌ ವೈರಸ್‌ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ‘ಸದ್ಯ ಹೊಸ ರೂಪಾಂತರಿ ತಳಿಯಿಂದ ಜಗತ್ತಿಗೆ ಅಪಾಯವಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ವೈರಸ್‌ ಲಸಿಕೆಯಿಂದ ಉತ್ಪಾದಿತ ಮತ್ತು ಈ ಹಿಂದೆ ಸೋಂಕು ಕಾಣಿಸಿಕೊಂಡ ಬಳಿಕ ಉತ್ಪಾದನೆಯಾಗಿರುವ ರೋಗ ನಿರೋಧಕ ಶಕ್ತಿಯನ್ನೂ ಭೇದಿಸಬಲ್ಲದು ಎಂಬುದಕ್ಕೆ ಇನ್ನಷ್ಟುಅಧ್ಯಯನದ ಅವಶ್ಯಕತೆ ಇದೆ’ ಎಂದು ಡಬ್ಲ್ಯುಎಚ್‌ಒ ಹೇಳಿದೆ. ರಾಜ್ಯ ಸರ್ಕಾರವೂ ಒಮಿಕ್ರಾನ್ ತಡೆಗೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಸಾರ್ವಜನಿಕರು ಮಾಡಬೇಕಾಗಿದ್ದೇನು..?