Asianet Suvarna News Asianet Suvarna News

Independence Day: ಉತ್ತಮ ಆಡಳಿತದ ಹೊಸ ಅಧ್ಯಾಯ ರಚಿಸುತ್ತಿದೆ ಭಾರತ: ಮೋದಿ

ದೊಡ್ಡ ಬದಲಾವಣೆಗಳನ್ನು ತರಲು, ಬಹುದೊಡ್ಡ ಸುಧಾರಣೆಗಳಿಗೆ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿರುತ್ತದೆ. ಇಂದು ಇಡೀ ವಿಶ್ವವೇ ನಮ್ಮ ದೇಶದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇಲ್ಲ ಎಂದು ಕಂಡುಕೊಂಡಿದೆ. ಸುಧಾರಣೆಗಳನ್ನು ಜಾರಿಗೊಳಿಸಲು ಉತ್ತಮ ಹಾಗೂ ಗುಣಮಟ್ಟದ ಆಡಳಿತ ಬೇಕಾಗುತ್ತದೆ.ಹೀಗಿರುವಾಗ ಭಾರತ ತನ್ನಿಂತಾನಾಗೇ ಹೇಗೆ ಉತ್ತಮ ಆಡಳಿತದ ಹೊಸ ಅಧ್ಯಾಯ ರಚಿಸುತ್ತಿದೆ ಎಂದು ಇಂದು ಇಡೀ ದೇಶವೇ ನೋಡುತ್ತಿದೆ ಎಂದಿದ್ದಾರೆ. 

ಬೆಂಗಳೂರು(ಆ.15): ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಂಡು ಅನುಭವಿಸಿದ ಸ್ವಾತಂತ್ರ್ಯದ ಸಂಭ್ರಮ ಕ್ಷಣಗಳಿಗೆ ಭಾನುವಾರ 75 ವರ್ಷದ ಸಂಭ್ರಮ. ಈ ಅಮೃತ ಮಹೋತ್ಸವದ ಹರ್ಷಾಚರಣೆ ದೇಶದೆಲ್ಲೆಡೆ ಹಬ್ಬದ ವಾತಾವರಣ ಮೂಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಗ್ಗೆ ದೆಹಲಿಯ ಕೆಂಪುಕೋಟೆಯ ಮೇಲಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿ ‘ಅಮೃತದ ಸಿಹಿ’ಯನ್ನು ಎಲ್ಲರಿಗೂ ಹಂಚಿದ್ದಾರೆ. 

ದೊಡ್ಡ ಬದಲಾವಣೆಗಳನ್ನು ತರಲು, ಬಹುದೊಡ್ಡ ಸುಧಾರಣೆಗಳಿಗೆ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿರುತ್ತದೆ. ಇಂದು ಇಡೀ ವಿಶ್ವವೇ ನಮ್ಮ ದೇಶದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇಲ್ಲ ಎಂದು ಕಂಡುಕೊಂಡಿದೆ. ಸುಧಾರಣೆಗಳನ್ನು ಜಾರಿಗೊಳಿಸಲು ಉತ್ತಮ ಹಾಗೂ ಗುಣಮಟ್ಟದ ಆಡಳಿತ ಬೇಕಾಗುತ್ತದೆ.ಹೀಗಿರುವಾಗ ಭಾರತ ತನ್ನಿಂತಾನಾಗೇ ಹೇಗೆ ಉತ್ತಮ ಆಡಳಿತದ ಹೊಸ ಅಧ್ಯಾಯ ರಚಿಸುತ್ತಿದೆ ಎಂದು ಇಂದು ಇಡೀ ದೇಶವೇ ನೋಡುತ್ತಿದೆ ಎಂದಿದ್ದಾರೆ. 

Video Top Stories