Asianet Suvarna News Asianet Suvarna News

ಯಾಸಿನ್ ಬಂಧನಕ್ಕೆ ಅಸಲಿ ಕಾರಣ? ಕಣಿವೆ ನಾಡಲ್ಲಿ ಶುರುವಾಯ್ತು ಮತ್ತೊಂದು ಕೋಲಾಹಲ!

ಕಾಶ್ಮೀರಿ ಭಯೋತ್ಪಾದಕನಿಗೆ 2 ಜೀವಾವಧಿ ಶಿಕ್ಷೆ.. ಕಾಶ್ಮೀರಿ ನರಮೇಧ ಮಾಡಿದವನ ಬೆನ್ನಿಗೆ ಪಾಕಿಸ್ತಾನದ ನರಿಗಳು ಬಂದು ನಿಂತಿದ್ದೇಕೆ..? ಗಾಂಧಿ ಮಾರ್ಗದಲ್ಲಿದ್ದಾನಂತೆ ಉಗ್ರ ರಾಕ್ಷಸ.. ಕಣಿವೆ ನಾಡಲ್ಲಿ ಶುರುವಾಯ್ತು ಮತ್ತೊಂದು ಕೋಲಾಹಲ.

ನವದೆಹಲಿ (ಮೇ. 26): ಜಮ್ಮು ಕಾಶ್ಮೀರದಲ್ಲಿ (Jammu and Kashmir) ದಶಕಗಳ ಕಾಲ ಭಯೋತ್ಪಾದಕರ ಬೆನ್ನಿಗೆ ನಿಂತು, ಅವರಿಗೆ ಹಣಕಾಸಿನ ನೆರವು ನೀಡುವ ಮೂಲಕ ದೇಶವಿರೋಧ ಸಂಚಿನಲ್ಲಿ ಭಾಗಿಯಾಗಿದ್ದ ಪ್ರತ್ಯೇಕತಾವಾದಿ ಉಗ್ರ ಯಾಸಿನ್ ಮಲಿಕ್ ಗೆ  (Yasin Malik) ಶಿಕ್ಷೆಯಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹಣಕಾಸಿನ ನೆರವು (Terror funding case) ನೀಡಿದ್ದ ಆರೋಪದ ಮೇಲೆ ದೋಷಿ ಎಂದು ಸಾಬೀತಾಗಿರುವ ಉಗ್ರ ಯಾಸಿನ್ ಮಲಿಕ್‌ ಗೆ  ದೆಹಲಿಯ ಎನ್‌ಐಎ ನ್ಯಾಯಾಲಯ (NIA Court) ಎರಡು ಜೀವಾವದಿ ಶಿಕ್ಷೆ  ಪ್ರಕಟಿಸಿದೆ. 5 ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ತನ್ನ ತೀರ್ಪು ನೀಡಿದ.ೆ ಎರಡು ಜೀವಾವಧಿ ಶಿಕ್ಷೆ ಜೊತೆಗೆ 10 ವರ್ಷಗಳ ಕಠಿಣ ಶಿಕ್ಷೆಯನ್ನು ದೆಹಲಿ ನ್ಯಾಯಾಲಯ ವಿಧಿಸಿದೆ. ಒಂದು ಪ್ರಕರಣದಲ್ಲಿ 10 ಲಕ್ಷ ರೂಪಾಯಿ, ಎರಡನೇ ಪ್ರಕರಣದಲ್ಲಿ 5 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ.

ಯಾಸಿನ್ ಮಲಿಕ್ ತನ್ನ ಕರ್ಮಕ್ಕೆ ಫಲ ಪಡೆದಿದ್ದಾನೆ: ಅಜ್ಮೀರ್ ದರ್ಗಾ ದಿವಾನ್

ಯಾಸಿನ್ ಮಲಿಕ್ ಗೆ ಶಿಕ್ಷೆ ಘೋಷಣೆಯಾದ ಬೆನ್ನಲ್ಲಿಯೇ ಪಾಕಿಸ್ತಾನ ಕೊತಕೊತ ಕುದಿಯುತ್ತಿದೆ. ಯಾಸಿನ್ ಮಲಿಕ್ ಪರವಾಗಿ ಲೆಕ್ಕವಿಲ್ಲದಷ್ಟು ಬೆಂಬಲಗಳು ಬಂದಿವೆ. ಸ್ವತಃ ಪಾಕಿಸ್ತಾನದ ಪ್ರಧಾನಿ ಯಾಸಿನ್ ಮಲಿಕ್ ಬಗ್ಗೆ ಮಾತನಾಡುತ್ತಾರೆ ಎಂದಾದಲ್ಲಿ ಯಾಸಿನ್ ಮಲಿಕ್ ಭಾರತಕ್ಕೆ ಮಾಡಿದ ದ್ರೋಹ ಎಂಥದ್ದು ಎನ್ನುವುದು ಎಲ್ಲರಿಗೂ ಅರಿವಾಗಹುದು.