Asianet Suvarna News Asianet Suvarna News

Ram Mandir in Nagara style: ಮಂದಿರ ನಿರ್ಮಾಣಕ್ಕೆ ಬಳಕೆ ಆಗಿಲ್ಲ ಕಬ್ಬಿಣ..! ಹೇಗಿರಲಿದೆ ರಾಮನ ದರ್ಬಾರು..?

ದೇಗುಲದಲ್ಲಿ ಐದು ಮಂಟಪಗಳ ಸೊಬಗು..!
ಭಾರತದ ಹೆಗ್ಗುರುತಾಗಲಿದೆ ರಾಮ ಮಂದಿರ..!
ರಾಮ ಲಲ್ಲಾನ ಪ್ರಾಣ ಪ್ರತಿಷ್ಟೆಗೆ ದಿನಗಣನೆ..!
ವಿಶ್ವದ ಗಮನ ಸೆಳೆದ ಶತಮಾನದ ನಿರ್ಮಾಣ!

First Published Jan 8, 2024, 3:25 PM IST | Last Updated Jan 8, 2024, 3:25 PM IST

ಅಯೋಧ್ಯಾ ನಗರಿಯಲ್ಲಿ ನಿರ್ಮಾಣವಾಗಿ ಲೋಕಾರ್ಪಣೆಗೆ ಸಿದ್ಧವಾಗಿರೋ ರಾಮಮಂದಿರ(Ram Mandir) ಭಾರತದ ಹೆಗ್ಗುರುತು ಅಂದ್ರೆ ಖಂಡಿತಾ ತಪ್ಪಾಗೋದಿಲ್ಲ. ಇದು ಶತಮಾನದ ನಿರ್ಮಾಣ. ಹಿಂದೂಗಳ ನೂರಾರು ವರ್ಷಗಳ ಕನಸು. ಇಂಥದ್ದೊಂದು ನಿರ್ಮಾಣ ಹೇಗಿರಲಿದೆ ಅನ್ನೋ ಕುತೂಹಲ ಎಲ್ಲರದ್ದು. ಮಂದಿರ ನಿರ್ಮಾಣದಲ್ಲಿ ಅನೇಕ ಕುತೂಹಲಕಾರಿ ಅಂಶಗಳು ಇವೆ. ಅಯೋಧ್ಯಾ(Ayodhya) ನಗರಿಯ ಶ್ರೀ ರಾಮಮಂದಿರ. ಹಿಂದೂ ಸಮಾಜದ ನೂರಾರು ವರ್ಷಗಳ ಕಾಯುವಿಕೆಗೆ ಪೂರ್ಣವಿರಾಮವಿಡೋಕೆ ಸಜ್ಜಾಗಿದೆ. ಪ್ರಭು ಶ್ರೀ ರಾಮನ ಮಂದಿರಕ್ಕೆ ದಿನಗಣನೆ ಶುರುವಾಗಿದೆ. ಇದೇ ಜನವರಿ 22ರಂದು ಅಯೋಧ್ಯಾ ರಾಮಮಂದಿರ ಲೋಕಾರ್ಪಣೆಯಾಗಲಿದೆ. ರಾಮಮಂದಿರ ನಿರ್ಮಾಣ ಅನ್ನೋದು ಕೋಟಿ ಕೋಟಿ ರಾಮ ಭಕ್ತರ ಕನಸು. ರಾಮಲಲ್ಲಾಗೆ ಅವನದೇ ಜಾಗವನ್ನ ಮತ್ತೆ ವಾಪಸ್ ಕೊಡಿಸೋಕೆ ಮಾಡಿದ ಕಸರತ್ತು ಅಷ್ಟಿಷ್ಟಲ್ಲಾ, ಜೀವ ಕೊಟ್ಟವರಿದ್ದಾರೆ. ಕಾನೂನು ಹೋರಾಟಕ್ಕೆ ತಮ್ಮ ಪಾದವನ್ನ ಸವೆಸಿದವರು ಸಿಕ್ತಾರೆ. ರಾಮ ಅನ್ನೋ ದೈವ ಹಿಂದೂಗಳ(Hindus) ಪಾಲಿಗೆ ಒಂದು ಪವಿತ್ರ ಭಾವನೆ. ಎಷ್ಟೋ ದಶಕಗಳಿಂದ ಹಿಂದೂಗಳು ಚಾತಕ ಪಕ್ಷಿಯಂತೆ ಕಾಯ್ತಾ ಇದ್ದ ಘಳಿಗೆ ದಿನೇ ದಿನೇ ಸನ್ನಿಹಿತವಾಗ್ತಾ ಇದೆ. 2024ರ ಜನವರಿಗೆ ಉದ್ಘಾಟನೆಗೆ ಸಿದ್ಧವಾಗುತ್ತಿರುವ ಅಯೋಧ್ಯೆ ಶ್ರೀರಾಮ ಮಂದಿರ ಮಾತ್ರವಲ್ಲದೇ ಇಲ್ಲಿನ ಬಹುತೇಕ ಸುತ್ತಮುತ್ತಲಿನ ಪ್ರದೇಶಗಳು ಅಭಿವೃದ್ಧಿ ಕಾಣುತ್ತಿವೆ. ಭಕ್ತರಿಗೆ ಅನುಕೂಲವಾಗುವಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಶೇಷ ಆಸಕ್ತಿ ತೋರಿಸ್ತಾ ಇದಾರೆ.

ಇದನ್ನೂ ವೀಕ್ಷಿಸಿ:  ರಾಮಮಂದಿರ ಉದ್ಘಾಟನೆ ವೇಳೆ ರೈಲಿನಲ್ಲಿ ಪ್ರಯಾಣಿಸಬೇಡಿ, ಮುಸ್ಲಿಮರು ಮನೆಯಲ್ಲೇ ಇರಿ: ಬದ್ರುದ್ದೀನ್ ಅಜ್ಮಲ್