ದೇಶದ ಸಂಸತ್‌ನಲ್ಲಿ ಚೆಲ್ಲಿದ ರಕ್ತ, ಸಂಸದ ಸಾರಂಗಿ ಮೇಲೆ ರಾಹುಲ್ ಗಾಂಧಿ ಪ್ರತಾಪ!
ಅಮಿತ್ ಶಾ ಅವರ ಹೇಳಿಕೆಯಿಂದ ಆರಂಭವಾದ ವಿವಾದ ದೊಡ್ಡ ಮಟ್ಟದ ಹೋರಾಟಕ್ಕೆ ಕಾರಣವಾಗಿದೆ. ಸಂಸತ್ ಹೊರಗೆ ಸಂಸದರ ರಕ್ತ ಚಿಮ್ಮಿದೆ. ರಾಹುಲ್ ಗಾಂಧಿ ಮಾಡಿದ ಎಡವಟ್ಟಿನಿಂದ ಪ್ರತಾಪ್ ಸಾರಂಗಿ ಗಾಯಗೊಂಡಿದ್ದಾರಾ?
ಬೆಂಗಳೂರು (ಡಿ.20): ಅಮಿತ್ ಶಾ ಅವರಾಡಿದ ಅದೊಂದು ಮಾತು, ದೊಡ್ಡ ಕೋಲಹಲ ಸೃಷ್ಟಿಸಿತ್ತು. ಆದರೆ, ಅದೇ ಮಾತಿನ ವಿಚಾರವಾಗಿ ಶುರುವಾದ ಹೋರಾಟ, ಇಡೀ ದೇಶದಲ್ಲೆ ಸಂಚಲನ ಸೃಷ್ಟಿಸಿದೆ. ಸಂಸತ್ ಹೊರಗೆ ಸಂಸದರ ರಕ್ತವೇ ಚಿಮ್ಮುವಂತಾಗಿದೆ.
ಅಷ್ಟಕ್ಕೂ ಆಗಿದ್ದೇನು? ರಾಹುಲ್ ಗಾಂಧಿ ಮಾಡಿದ ಎಡವಟ್ಟಿನಿಂದಲೇ, ಪ್ರತಾಪ್ ಸಾರಂಗಿ ಗಾಯಗೊಂಡರಾ? ತಪ್ಪು ಮಾಡಿದ್ದು ನಾನೇ ಅಂತ ರಾಹುಲ್ ಗಾಂಧಿ ಒಪ್ಪಿಕೊಂಡ್ರಾ? ಅಸಲಿಗೆ ಸಂಸತ್ ಭವನದ ಹೊರಗೆ ಆಗಿದ್ದೇನು? ಅದರಿಂದ ರಾಷ್ಟ್ರ ರಾಜಕಾರಣದಲ್ಲಿ ಆಗೋದೇನು?
ರಾಹುಲ್ ಗಾಂಧಿ ಅವರೇನೋ ಬಿಜೆಪಿ ವಿರುದ್ಧ ಗುಡುಗೋದಕ್ಕೆ ಸಿದ್ಧರಾಗಿ ಬಂದಿದ್ರು. ಆದರೆ, ಇಲ್ಲಿ ಆಗಿರೋದೇ ಬೇರೆ.. ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ಸರಣಿ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ಕಾರಣವಾಗಿದ್ದು ಈ ಘಟನೆ.