Asianet Suvarna News Asianet Suvarna News

5 States Election: ಸಿಎಂ ರೇಸ್‌ನಿಂದ ಯೂಟರ್ನ್ ಹೊಡೆದಿದ್ದೇಕೆ ಪ್ರಿಯಾಂಕ ಗಾಂಧಿ ವಾದ್ರಾ.?

ಉತ್ತರಪ್ರದೇಶದಲ್ಲಿ (Uttar Pradesh) ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ತಮ್ಮ ಹೇಳಿಕೆ ಭಾರೀ ಸುದ್ದಿಯಾದ ಬೆನ್ನಲ್ಲೇ ‘ನಾನು ಹಾಗೆ ಹೇಳಿಲ್ಲ’ ಎಂದು ಪ್ರಿಯಾಂಕಾ ವಾದ್ರಾ (Priyanka Vadra) ಸ್ಪಷ್ಟನೆ ನೀಡಿದ್ದಾರೆ.

ಲಕ್ನೋ (ಜ. 24): ಉತ್ತರಪ್ರದೇಶದಲ್ಲಿ (Uttar Pradesh) ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ತಮ್ಮ ಹೇಳಿಕೆ ಭಾರೀ ಸುದ್ದಿಯಾದ ಬೆನ್ನಲ್ಲೇ ‘ನಾನು ಹಾಗೆ ಹೇಳಿಲ್ಲ’ ಎಂದು ಪ್ರಿಯಾಂಕಾ ವಾದ್ರಾ (Priyanka Vadra) ಸ್ಪಷ್ಟನೆ ನೀಡಿದ್ದಾರೆ.

ಪಕ್ಷದ ಯುವ ಪ್ರಣಾಳಿಕೆ ಬಿಡುಗಡೆ ವೇಳೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ, ‘ನಿಮಗೆ ಕಾಂಗ್ರೆಸ್‌ ಪಕ್ಷದಲ್ಲಿ ಬೇರೆ ಯಾರದ್ದಾದರೂ ಮುಖ ಕಾಣಿಸುತ್ತಿದೆಯೇ? ಕಾಣುತ್ತಿದೆಯಾದರೆ, ಎಲ್ಲೆಡೆ ನನ್ನ ಚಿತ್ರವೇ ಕಾಣಿಸುತ್ತಿದೆ’ ಎಂದಿದ್ದರು. ಇದರಿಂದ ಪ್ರಿಯಾಂಕಾ ಸಿಎಂ ಅಭ್ಯರ್ಥಿ ಬಿಂಬಿತವಾಗಿತ್ತು.

ಯು ಪಿ ಯಲ್ಲಿ ಕಾಂಗ್ರೆಸ್ ಗೆ 8 ರಿಂದ 10 ಸೀಟು ಗಳು ಬರಬಹುದು ಎಂದು ಸರ್ವೇ ಹೇಳುತ್ತಿವೆ. ಹಾಗಾಗಿಯೇ ಎಲ್ಲೂ ಕೂಡ ಪ್ರಿಯಾಂಕಾ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿ ಕೊಂಡಿಲ್ಲ.ಆದರೆ ಈಗ ಬಾಯಿ ತಪ್ಪಿ ಹೇಳಿ ವಿವಾದ ಮೈ ಮೇಲೆ ಎಳೆದುಕೊಂಡು ನಾನು ಹಾಗೆ ಹೇಳೇ ಇಲ್ಲ ಎಂದು ಅನ್ನುತ್ತಿದ್ದಾರೆ.

 

Video Top Stories