Asianet Suvarna News Asianet Suvarna News

Independence Day 2022: ಸ್ವಾತಂತ್ರ್ಯೋತ್ಸವದಲ್ಲಿ ಮೋದಿಯ 5ನೇ ಅತೀ ದೀರ್ಘ ಭಾಷಣ!

ದೇಶದ 76ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ  ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜಾರೋಹಣ ನಡೆಸಿದ್ದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಒಟ್ಟಾರೆ 83 ನಿಮಿಷಗಳ ಕಾಲ ನರೇಂದ್ರ ಮೋದಿ ಮಾತನಾಡಿದ್ದಾರೆ. ಇದು ಸ್ವಾತಂತ್ರೋತ್ಸವದಲ್ಲಿ ಮೋದಿ ಅವರ 9ನೇ ಭಾಷಣವಾಗಿದೆ.
 

ನವದೆಹಲಿ (ಆ. 15): ದೇಶ ಸೋಮವಾರ ಸ್ವಾತಂತ್ರೋತ್ಸವ ಸಂಭ್ರಮವನ್ನು ಅಚರಿಸಿತು. ಕೆಂಪುಕೋಟೆಯಲ್ಲಿ 9ನ ಬಾರಿಗೆ ನರೇಂದ್ರ ಮೋದಿ ರಾಷ್ಟ್ರಧ್ವಜವನ್ನು ಹಾರಿಸಿ ಭಾಷಣ ಮಾಡಿದರು. ಈ ವೇಳೆ ದೇಶೀಯ ನಿರ್ಮಿತ ಎಟಿಎಜಿಎಸ್ ಹೋವಿಟ್ಜರ್‌ ಗನ್‌ ಮೂಲಕ 21 ಗನ್‌ ಸೆಲ್ಯೂಟ್‌ ನೀಡಲಾಯಿತು. ತಮ್ಮ 83 ನಿಮಿಷಗಳ ಭಾಷಣದಲ್ಲಿ ಮೋದಿ ದೇಶದ ಮುಂದೆ ಹಲವಾರು ವಿಚಾರಗಳನ್ನು ಪ್ರಸ್ತಾಪ ಮಾಡಿದರು. ಭ್ರಷ್ಟಾಚಾರ, ಭಾಷೆ ಹಾಗೂ ಪ್ರಜಾಪ್ರಭುತ್ವ, ಗಾಂಧಿ, ನೆಹರು ಹಾಗೂ ಸಾವರ್ಕರ್‌ ಅವರನ್ನು ನೆನಪಿಸಿಕೊಂಡರು.

ಇನ್ನು ದೇಶದ ನಾರಿ ಶಕ್ತಿ ವಿಚಾರ ಪ್ರಸ್ತಾಪ ಮಾಡುವ ವೇಳೆ ಭಾವುಕವಾಗಿ ಮಾತನಾಡಿದರು. ದೇಶದ ಹಣವನ್ನು ಲೂಟಿ ಮಾಡಿದವರು ಹಣವನ್ನು ವಾಪಸ್‌ ನೀಡಲೇಬೇಕು ಎಂದು ಹೇಳಿದರು. ಮೋದಿ ಅವರು ಮಾಡಿದ ಭಾಷಣ, ಸ್ವಾತಂತ್ರ್ಯೋತ್ಸವದಲ್ಲಿ ಮೋದಿ ಅವರು 5ನೇ ಸುದೀರ್ಘ ಭಾಷಣ ಎನಿಸಿದೆ.

Independence Day: ಮೇಡ್‌ ಇನ್‌ ಇಂಡಿಯಾ ಹೊವಿಟ್ಜರ್ ಗನ್ಸ್ ಮೂಲಕ ಮೊಟ್ಟಮೊದಲ ಬಾರಿ ಗನ್‌ ಸೆಲ್ಯೂಟ್‌!

2016ರಲ್ಲಿ 96 ನಿಮಿಷಗಳ ಕಾಲ ಮಾತನಾಡಿದ್ದು ಈವರೆಗಿನ ದಾಖಲೆ ಎನಿಸಿದೆ. ಉಳಿದಂತೆ 2019ರಲ್ಲಿ 93 ನಿಮಿಷ, 2021ರಲ್ಲಿ 88 ನಿಮಿಷ, 2015 ಹಾಗೂ 2020ರಲ್ಲಿ ತಲಾ 86 ನಿಮಿಷ ಮಾತನಾಡಿದ್ದರು. ಉಳಿದಂತೆ, 2014ರಲ್ಲಿ 65 ನಿಮಿಷ, 2017ರಲ್ಲಿ56 ನಿಮಿಷ ಹಾಗೂ 2018ರಲ್ಲಿ 82 ನಿಮಿಷ ಮಾತನಾಡಿದ್ದರು.

Video Top Stories