Asianet Suvarna News Asianet Suvarna News

ಅಹಮದಾಬಾದ್‌, ಪುಣೆ, ಹೈದರಾಬಾದ್; ಮೋದಿ ವ್ಯಾಕ್ಸಿನ್ ಟೂರ್!

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಹಮದಾಬಾದ್‌, ಪುಣೆ ಮತ್ತು ಹೈದರಾಬಾದ್‌ನ ಕೊರೋನಾ ಲಸಿಕೆ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಲಿದ್ದಾರೆ. ದೇಶದಲ್ಲಿ ಕೊರೋನಾ ವೈರಸ್‌ ಲಸಿಕೆ ಅಭಿವೃದ್ಧಿಯ ಪ್ರಸಕ್ತ ಸ್ಥಿತಿಗತಿಯ ಖುದ್ದು ಅವಲೋಕನ ನಡೆಸಲಿದ್ದಾರೆ. ಕೊರೋನಾ 2ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶೀಘ್ರವೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಎಂಬ ವರದಿಗಳ ಬೆನ್ನಲ್ಲೇ ನಿಗದಿಯಾಗಿರುವ ಈ ಭೇಟಿ ಭಾರೀ ಕುತೂಹಲ ಕೆರಳಿಸಿದೆ.

Nov 28, 2020, 11:21 AM IST

ನವದೆಹಲಿ(ನ.28) ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಹಮದಾಬಾದ್‌, ಪುಣೆ ಮತ್ತು ಹೈದರಾಬಾದ್‌ನ ಕೊರೋನಾ ಲಸಿಕೆ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಲಿದ್ದಾರೆ. ದೇಶದಲ್ಲಿ ಕೊರೋನಾ ವೈರಸ್‌ ಲಸಿಕೆ ಅಭಿವೃದ್ಧಿಯ ಪ್ರಸಕ್ತ ಸ್ಥಿತಿಗತಿಯ ಖುದ್ದು ಅವಲೋಕನ ನಡೆಸಲಿದ್ದಾರೆ. ಕೊರೋನಾ 2ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶೀಘ್ರವೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಎಂಬ ವರದಿಗಳ ಬೆನ್ನಲ್ಲೇ ನಿಗದಿಯಾಗಿರುವ ಈ ಭೇಟಿ ಭಾರೀ ಕುತೂಹಲ ಕೆರಳಿಸಿದೆ.

ಸ್ಪುಟ್ನಿಕ್‌ ಲಸಿಕೆಯೂ ಭಾರತದಲ್ಲಿ ಉತ್ಪಾದನೆ!

ಮಧ್ಯಾಹ್ನ 12.30ರ ವೇಳೆಗೆ ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನಾ ಕೇಂದ್ರವಾದ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ಗೆ ಭೇಟಿ ನೀಡಲಿದ್ದಾರೆ. ಸೀರಂ ಇನ್‌ಸ್ಟಿಟ್ಯೂಟ್‌ ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ಮತ್ತು ಆಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್‌ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ಮತ್ತು ಪ್ರಯೋಗಕ್ಕೆ ಒಳಪಡಿಸುವ ಗುತ್ತಿಗೆ ಪಡೆದುಕೊಂಡಿದೆ.

ರಕ್ಷಣಾ, ಹೂಡಿಕೆ, ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಭಾರತ-UK ಜೊತೆಯಾಗಿ ಹೆಜ್ಜೆ: ಮೋದಿ!

ಅಮೆರಿಕದ ಫೈಝರ್‌ ಮತ್ತು ಮಾಡೆರ್ನಾಗೆ ಹೋಲಿಸಿದರೆ ಕೋವಿಶೀಲ್ಡ್‌ ಅತ್ಯಂತ ಅಗ್ಗ ಮತ್ತು ಸುಲಭವಾಗಿ ಸಂಗ್ರಹಿಸಬಲ್ಲುದಾಗಿದೆ. ಹೀಗಾಗಿಯೇ ಭಾರತ ಸರ್ಕಾರ ಕೋವಿಶೀಲ್ಡ್‌ ಬಳಕೆಗೆ ತುರ್ತು ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಈ ಭೇಟಿ ಅತ್ಯಂತ ಮಹತ್ವದ್ದು ಎಂದು ಪರಿಗಣಿಸಲಾಗಿದೆ.