ವಯನಾಡ್‌ನಲ್ಲಿ ಮೋದಿ ವೈಮಾನಿಕ ಸಮೀಕ್ಷೆ, ಸಂತ್ರಸ್ತರಿಗೆ ಧೈರ್ಯ ತುಂಬಿದ ಪ್ರಧಾನಿ!

PM modi wayanad visit updates ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೂಕುಸಿತದಿಂದಾಗಿ ಅಕ್ಷರಶಃ ನರಕವಾಗಿರುವ ವಯನಾಡ್‌ಗೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದರು.

First Published Aug 10, 2024, 11:06 PM IST | Last Updated Aug 10, 2024, 11:06 PM IST

ಬೆಂಗಳೂರು (ಆ.10): ವಯನಾಡ್‌ನಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಕ್ತಾಯವಾದ ಬೆನ್ನಲ್ಲಿಯೇ ಭೂಕುಸಿತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದರು. ಈ ವೇಳೆ ಸಂತ್ರಸ್ತರನ್ನು ಭೇಟಿ ಮಾಡು ಮಾತುಕತೆ ನಡೆಸಿದರು.

ರಕ್ಷಣಾ ಕಾರ್ಯಾಚರಣೆಗಳು ನಡೆದ ರೀತಿ, ಮುಂದಾಗಬೇಕಾದ ಕೆಲಸಗಳ ಬಗ್ಗೆ ಮೋದಿ ವಿವರಗಳನ್ನೂ ಪಡೆದುಕೊಂಡರು. ಈ ವೇಳೆ ಕೇರಳ ಸಿಎಂ ಪಿಣರಾಯಿ ವಿಜಯನ್‌, ಗವರ್ನರ್‌ ಮೊಹಮದ್‌ ಆರಿಫ್‌ ಖಾನ್‌ ಪ್ರಧಾನಿ ಜೊತೆಯಲ್ಲಿದ್ದರು.

ದುರಂತದಲ್ಲಿ ಮಡಿದ ಮಕ್ಕಳೆಷ್ಟು? ವಯನಾಡು ಸಂತ್ರಸ್ಥರ ಭೇಟಿಯಾಗಿ ಭಾವುಕರಾದ ಮೋದಿ!

ಈ ದುರಂತದಲ್ಲಿ ಬದುಕುಳಿದವರ ಜೊತೆ ನಾವಿದ್ದೇವೆ. ಕೇಂದ್ರ ಸರ್ಕಾರ ಇಲ್ಲಿಗೆ ಸಚಿವರ  ತಂಡವನ್ನು ಕಳುಹಿಸಿದೆ. ಮುಖ್ಯಮಂತ್ರಿ, ಅಧಿಕಾರಿಗಳು ಭೇಟಿ ಮಾಡಿದ್ದಾರೆ. ಈ ಘಟನೆ ಬಗ್ಗೆ ಸಿಎಂ ವಿವರವಾಗಿ ಪತ್ರ ಕಳುಹಿಸುವುದಾಗಿ ಹೇಳಿದ್ದಾರೆ. ನಾನು ಬದುಕುಳಿದವರಿಗೆ ಭರವಸೆ ನೀಡಲು ಬಯಸುತ್ತೇನೆ. ಈ ದುಃಖದ ಸಮಯದಲ್ಲಿ  ಕೇಂದ್ರ ಮತ್ತು ರಾಜ್ಯ ಸರ್ಕಾರ, ದೇಶದ ಜನರು ಸೇರಿ  ಎಲ್ಲರೂ ನಿಮ್ಮೊಂದಿಗೆ ಇರುತ್ತಾರೆ ಎಂದು ಹೇಳಿದರು.

Video Top Stories