Asianet Suvarna News Asianet Suvarna News

Kedarnath| ಸಾಕಾರವಾಯ್ತು 9 ವರ್ಷಗಳ ಹಿಂದಿನ ಮೋದಿ ಪ್ರತಿಜ್ಞೆ..!

*  ಬೋಲೆನಾಥನ ಭೂಮಿಯಲ್ಲಿ ಜಗದ್ಗುರುವಿನ ನಮನ
*  ಬರೋಬ್ಬರಿ 9 ವರ್ಷಗಳ ಹಿಂದೆ ಮೋದಿ ಸಂಕಲ್ಪ
*  ಮೈಸೂರಿನ ಪ್ರತಿಮೆ ಕೇದಾರನಾಥ್‌ದಲ್ಲಿ ಪ್ರತಿಷ್ಠಾಪನೆಯಾಗಿದ್ಯಾಕೆ?.  

ಕೇದಾರನಾಥ್‌(ನ.06): 9 ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಪ್ರತಿಜ್ಞೆಯೊಂದನ್ನ ಮಾಡಿದ್ದರು. ಪ್ರತಿಜ್ಞೆ ಮಾಡುವಂತದ್ದು ನಡೆದಿದ್ದೇನು?. ಇಂದು ಆಗಿದ್ದೇನು?. ಬರೋಬ್ಬರಿ 9 ತಿಂಗಳು ಪ್ರತಿದಿನ 14 ಗಂಟೆ ಕೆಲಸ, 12 ಅಡಿ ಎತ್ತರ, 28 ಟನ್‌ ತೂಕದ ಮೂರ್ತಿ, ಇದು ಮೈಸೂರಿನ ಪ್ರತಿಮೆ. ಕೇದಾರನಾಥ್‌ದಲ್ಲಿ ಈ ಮೂರ್ತಿ ಪ್ರತಿಷ್ಠಾಪನೆಯಾಗಿದ್ಯಾಕೆ?. ಮೋದಿ ಸಂಕಲ್ಪ ನಿಜವಾಗಿದ್ದು ಹೇಗೆ?. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ಕಾರ್ಯ ಇಡೀ ದೇಶದ ಸ್ಪೂರ್ತಿಯನ್ನೇ ಇಮ್ಮಡಿಗೊಳಿಸಿದೆ. 

ನೇತ್ರದಾನಕ್ಕೆ ಅಪ್ಪು ಸ್ಪೂರ್ತಿ: ಕಣ್ಣುದಾನಕ್ಕೆ ಸಾಲುಗಟ್ಟಿ ನಿಂತ ಜನ..!

ಬರೋಬ್ಬರಿ 9 ವರ್ಷಗಳ ಹಿಂದೆ ಕೈಗೊಂಡಿದ್ದ ಸಂಕಲ್ಪವನ್ನ ಮೋದಿ ಅವರು ಈಗ ನಿಜವಾಗಿಸಿದ್ದಾರೆ. ಮೋದಿ ಅವರು ಶುಕ್ರವಾರ ಕೇದಾರನಾಥಕ್ಕೆ ಭೇಟಿ ನೀಡಿದ್ದರು. ಮೋದಿ ಕೇದಾರನಾಥಕ್ಕೆ ಯಾವಾಗ್ಲೇ ಹೋದರೂ ಒಂದು ದೈವಿಕ ಕಾರ್ಯದ ಸಲುವಾಗಿಯೇ ಹೋಗಿರುತ್ತಾರೆ. ಈ ಬಾರಿಯೂ ಕೂಡ ಅದೇ ತರ ಹೋಗಿದ್ದರು. ಈ ಬಾರಿ ಅವರ ಉದ್ದೇಶವಿದ್ದದ್ದು ಜಗದ್ಗುರು ಆದಿ ಶಂಕರಾಚಾರ್ಯರ ಭವ್ಯಮೂರ್ತಿ ಅನಾವರಣಗೊಳಿಸಲಿಕ್ಕೆ  ಕೇದಾರನಾಥಕ್ಕೆ ಹೋಗಿದ್ದರು. 
 

Video Top Stories