Asianet Suvarna News Asianet Suvarna News

ಮನಾಲಿ-ಲೇಹ್‌ ನಡುವೆ ಅಟಲ್ ‌ಸುರಂಗ ಮಾರ್ಗ ಲೋಕಾರ್ಪಣೆ; ಸರ್ವಋುತು ಸುರಂಗವಿದು

ಮಾಜಿ ಪ್ರಧಾನಿ ವಾಜಪೇಯಿ ಅವರ ಕನಸಿನ ಯೋಜನೆ ಹಿಮಾಚಲ ಪ್ರದೇಶದ ರೋಹಟಂಗ್‌ನ ಸುರಂಗ ಮಾರ್ಗ ಯೋಜನೆ ಮುಕ್ತಾಯಗೊಂಡಿದ್ದು ಪ್ರಧಾನಿ ಮೋದಿ ಇಂದು ಲೋಕಾರ್ಪಣೆಗೊಳಿಸಿದ್ದಾರೆ. 

ಬೆಂಗಳೂರು (ಅ. 03): ಮಾಜಿ ಪ್ರಧಾನಿ ವಾಜಪೇಯಿ ಅವರ ಕನಸಿನ ಯೋಜನೆ ಹಿಮಾಚಲ ಪ್ರದೇಶದ ರೋಹಟಂಗ್‌ನ ಸುರಂಗ ಮಾರ್ಗ ಯೋಜನೆ ಮುಕ್ತಾಯಗೊಂಡಿದ್ದು ಪ್ರಧಾನಿ ಮೋದಿ ಇಂದು ಲೋಕಾರ್ಪಣೆಗೊಳಿಸಿದ್ದಾರೆ. 

ವ್ಯೂಹಾತ್ಮಕವಾಗಿ ಮಹತ್ವವಾಗಿರುವ ಈ ಯೋಜನೆಗೆ 2002ರಲ್ಲಿ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಚಾಲನೆ ನೀಡಿತ್ತು. 2002ರಲ್ಲಿ ಅಡಿಗಲ್ಲು ಹಾಕಲಾಗಿದ್ದ ಈ ಕಾಮಗಾರಿ 3300 ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಂಡಿದೆ. 

ವಿಶ್ವದ ಅತಿ ಉದ್ದದ ಹೆದ್ದಾರಿ ಅಟಲ್‌ ಸುರಂಗ ಮಾರ್ಗ ಲೋಕಾರ್ಪಣೆ: ವಿಶೇಷತೆಗಳಿವು

ವಿಶೇಷತೆಗಳಿವು

* ಕುದುರೆ ಲಾಳಾಕೃತಿಯ ದ್ವಿಪಥ ಮಾರ್ಗವನ್ನು ಸುರಂಗ ಹೊಂದಿದೆ * 8 ಮೀ. ಅಗಲದ ರಸ್ತೆ. 5.525 ಮೀ. ಎತ್ತರದ ವಾಹನ ಚಲಿಸಬಹುದು *ನಿತ್ಯ 3000 ಕಾರು, 1500 ಲಾರಿಗಳ ಸಂಚಾರಕ್ಕೆ ಅವಕಾಶ * ಗರಿಷ್ಠ 80 ಕಿ.ಮೀ. ವೇಗದಲ್ಲಿ ಹೋಗಬಹುದು * ಸರ್ವಋುತು ಸುರಂಗ. ಹಿಮಪಾತ ವೇಳೆಯೂ ವಾಹನ ಸಂಚಾರ * 150 ಮೀಟರ್‌ಗಳಿಗೊಂದು ಟೆಲಿಫೋನ್‌ ವ್ಯವಸ್ಥೆ *ಪ್ರತೀ 1 ಕಿ.ಮೀ.ಗೊಂದು ಗಾಳಿಯ ಶುದ್ಧತೆಯ ಪರೀಕ್ಷಾ ವ್ಯವಸ್ಥೆ *ಪ್ರತೀ 250 ಮೀಟರ್‌ಗೊಂದು ಬ್ರಾಡ್‌ಕಾಸ್ಟ್‌ ವ್ಯವಸ್ಥೆ, ಸಿಸಿ ಕ್ಯಾಮೆರಾ, ಸ್ವಯಂಚಾಲಿತ ಅನಾಹುತ ಘಟನೆ ಪತ್ತೆ ವ್ಯವಸ್ಥೆ

Video Top Stories