Asianet Suvarna News Asianet Suvarna News

ಕೋವಿಡ್ ನಿರ್ವಹಣೆ, ಲಸಿಕೆ ತಯಾರಿಕೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಪಿಎಂ ಮೋದಿ ಸಭೆ!

ಕೋವಿಡ್ ಲಸಿಕೆ ವಿತರಣೆ ,ಹಂಚಿಕೆ ಮತ್ತು ನಿರ್ವಹಣೆ ಕ್ರಮಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಭೆ ನಡೆಸಲಿದ್ದಾರೆ. ಮೋದಿ ನೇತೃತ್ವದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಭೆಯಲ್ಲಿ ಸಿಎಂ ಬಿಎಸ್ ವೈ ಭಾಗಿಯಾಗಲಿದ್ದಾರೆ. 12 ಗಂಟೆಗೆ ವೀಡಿಯೋ ಕಾನ್ಪರನ್ಸ್ ಮೂಲಕ ಸಭೆ ನಡೆಸಲಿರುವ ಪಿಎಂ ಮೋದಿ.

Nov 24, 2020, 10:17 AM IST

ನವದೆಹಲಿ, (ನ. 24): ವಿವಿಧ ರಾಜ್ಯಗಳಲ್ಲಿರುವ ಕೊರೋನಾ ಪರಿಸ್ಥಿತಿ ಬಗ್ಗೆ ಮತ್ತು ಲಸಿಕೆ ತಯಾರಿಕೆ ಹಾಗೂ ವಿತರಣೆ ಬಗ್ಗೆ ಚರ್ಚಿಸಲು ಪ್ರಧಾನ ನರೇಂದ್ರ ಮೋದಿ ಇಂದು ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಆರಂಭವಾಗಲಿದೆ.

ಸಭೆಯು ಎರಡು ಹಂತದಲ್ಲಿ ನಡೆಯಲಿದ್ದು, 10 ಗಂಟೆಯಿಂದ 12 ಗಂಟೆವರೆಗೆ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ದೆಹಲಿ, ಗುಜರಾತ್, ಹರಿಯಾಣ, ರಾಜಸ್ಥಾನ, ಕೇರಳ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಚರ್ಚೆಯಾಗಲಿದೆ. 12 ಗಂಟೆಯ ಬಳಿಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಯೂ ಕೊರೋನಾ ಪರಿಸ್ಥಿತಿಯ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.