Asianet Suvarna News Asianet Suvarna News

ಆಸ್ಪತ್ರೆ ವಾರ್ಡ್‌ ಒಳಗೇ ಕೊಳಚೆ ನೀರು: ಅಲ್ಲೇ ರೋಗಿಗಳಿಗೆ ಟ್ರೀಟ್ಮೆಂಟ್!

ಒಂದೆಡೆ ಕೊರೋನಾ ಆತಂಕ ಸೃಷ್ಟಿಸಿದ್ದರೆ ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯವಿಲ್ಲದೇ ಜನರು ಪರದಾಡುತ್ತಿದ್ದಾರೆ.. ಹೀಗಿರುವಾಗ ಹೈದರಾಬಾದ್‌ನ ಒಸ್ಮಾನಿಯಾ ಆಸ್ಪತ್ರೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಹೈದರಾಬಾದ್(ಜು.16) ಒಂದೆಡೆ ಕೊರೋನಾ ಆತಂಕ ಸೃಷ್ಟಿಸಿದ್ದರೆ ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯವಿಲ್ಲದೇ ಜನರು ಪರದಾಡುತ್ತಿದ್ದಾರೆ.. ಹೀಗಿರುವಾಗ ಹೈದರಾಬಾದ್‌ನ ಒಸ್ಮಾನಿಯಾ ಆಸ್ಪತ್ರೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಹೌದು ಈ ಆಸ್ಪತ್ರೆಯ ವಾರ್ಡ್‌ನೊಳಗೇ ಕೊಳಚೆ ನೀರು ಹರಿಯುತ್ತಿದ್ದು, ರೋಗಿಗಳು ಆ ನೀರಿನ ನಡುವೆ ಇರುವ ಬೆಡ್‌ಗಳ ಮೇಲೆ ಮಲಗಿಕೊಂಡಿದ್ದಾರೆ. ವಾರ್ಡ್‌ನಲ್ಲಿ ಮೊಣಕಾಲಿನವರೆಗೂ ಕೊಳಚೆ ನೀರು ಹರಿಯುತ್ತಿರುವ ದೃಶ್ಯ ಸದ್ಯ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಮಳೆಯಿಂದಾಗಿ ಈ ಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಆಸ್ಪತ್ರೆ ಸಿಬ್ಬಂದಿ ಈ ಬಗ್ಗೆ ತಕೆ ಕೆಡಿಸಿಕೊಳ್ಳುತ್ತಿಲ್ಲ. ರೋಗಿಗಳನ್ನು ಅಲ್ಲಿಂದ ಬೇರೆಡೆ ಸ್ತಳಾಂತರಿಸುವ ಕಾರ್ಯವನ್ನೂ ಆರಂಭಿಸಿಲ್ಲ.