ನರ್ಸ್ ಮಾರಿಯಾ ವಿಕ್ಟೋರಿಯಾ ಜುವಾನ್‌ಗೆ ಆ್ಯಸ್ಟರ್ ಗಾರ್ಡಿಯನ್ಸ್ ಗ್ಲೋಬಲ್ ನರ್ಸಿಂಗ್ ಅವಾರ್ಡ್ 2024

ಫಿಲಿಪ್ಪೀನ್ಸ್‌ನ ನರ್ಸ್ ಮರಿಯಾ ವಿಕ್ಟೋರಿಯಾ ಜುವಾನ್ ಅವರಿಗೆ ಆಸ್ಟರ್ ಗಾರ್ಡಿಯನ್ಸ್ ಗ್ಲೋಬಲ್ ನರ್ಸಿಂಗ್ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ 2 ಕೋಟಿ ರೂಪಾಯಿ ಬಹುಮಾನದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಆಜಾದ್ ಮೂಪೆನ್ ಮತ್ತು ದಿನೇಶ್ ಗುಂಡೂರಾವ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

First Published Jan 13, 2025, 5:59 PM IST | Last Updated Jan 13, 2025, 5:59 PM IST

ಬೆಂಗಳೂರು (ಜ.13): ಫಿಲಿಪ್ಪೀನ್ಸ್‌ನ ನರ್ಸ್ ಮರಿಯಾ ವಿಕ್ಟೋರಿಯಾ ಜುವಾನ್, ಫಿಲಿಪೈನ್ಸ್ ಆರ್ಮಿ ಹೆಲ್ತ್ ಸರ್ವಿಸಸ್‌ನ ಕನ್ಸಲ್ಟೆಂಟ್‌ ಮತ್ತು ಫಿಲಿಪ್ಪೀನ್ಸ್‌ನ ಸಶಸ್ತ್ರ ಪಡೆಗಳ ರಿಸರ್ವ್ ಫೋರ್ಸ್‌ನ ಕರ್ನಲ್, ಆಸ್ಟರ್ ಗಾರ್ಡಿಯನ್ಸ್ ಗ್ಲೋಬಲ್ ನರ್ಸಿಂಗ್ ಪ್ರಶಸ್ತಿ ವಿಜೇತರಾಗಿ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ 2 ಕೋಟಿ ರೂಪಾಯಿ ಬಹುಮಾನದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆಸ್ಟರ್ ಡಿಎಂ ಹೆಲ್ತ್‌ಕೇರ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ಆಜಾದ್ ಮೂಪೆನ್ ವಿಜೇತರನ್ನು ಘೋಷಿಸಿದರು ಮತ್ತು ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಬಾಲಿವುಡ್ ನಟಿ ಸೋನಾಲಿ ಬೇಂದ್ರೆ, ಯುಟಿ ಖಾದರ್, ಗೌರವಾನ್ವಿತ ಪ್ರಶಸ್ತಿಯನ್ನು ನೀಡಿದರು. 

ಫಿಲಿಪ್ಪಿನ್ಸ್‌ ಆರ್ಮಿ ಹೆಲ್ತ್ ಸರ್ವಿಸಸ್ ಕನ್ಸಲ್ಟೆಂಟ್ ಮತ್ತು ಸಶಸ್ತ್ರ ಪಡೆ ಕರ್ನಲ್ ನರ್ಸ್ ಮಾರಿಯಾ ವಿಕ್ಟೋರಿಯಾ ದೂರದೃಷ್ಟಿ ನಾಯಕತ್ವ, ನಾವೀನ್ಯತೆ ಮತ್ತು ಅವರ ತಂಡ ಹಾಗೂ  ಸೈನಿಕರ ಕಲ್ಯಾಣಕ್ಕಾಗಿ ಅವರ ನಿರಂತರ ಶ್ರಮದ ಮೂಲಕ ಗುರುತಿಸಿಕೊಂಡಿದ್ದಾರೆ.