ನಾಳೆಯಿಂದ ಅನ್‌ಲಾಕ್ 2.0 ಜಾರಿ; ಯಾವುದಕ್ಕೆ ನಿರ್ಬಂಧ? ಯಾವುದಕ್ಕೆ ಇಲ್ಲ?
ಬುಧವಾರದಿಂದ ಜಾರಿಗೆ ಬರುವ ಅನ್‌ಲಾಕ್ 2.0 ಸಂಬಂಧ ಕೇಂದ್ರ ಗೃಹ ಸಚಿವಾಲಯ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೆಲವೊಂದು ಸಣ್ಣಪುಟ್ಟಬದಲಾವಣೆ ಬಿಟ್ಟರೆ ಅನ್‌ಲಾಕ್ 1ರಲ್ಲಿ ಎಲ್ಲಾ ನಿಯಮಗಳು ಮುಂದುವರೆಯಲಿವೆ. ಕೊರೋನಾ ವೈರಸ್ ಅಬ್ಬರ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜು.31ರವರೆಗೂ ಶಾಲೆ- ಕಾಲೇಜು, ಶೈಕ್ಷಣಿಕ ಹಾಗೂ ಕೋಚಿಂಗ್ ಸಂಸ್ಥೆಗಳನ್ನು ಆರಂಭಿಸದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಬೆಂಗಳೂರು (ಜೂ. 30): ಬುಧವಾರದಿಂದ ಜಾರಿಗೆ ಬರುವ ಅನ್‌ಲಾಕ್ 2.0 ಸಂಬಂಧ ಕೇಂದ್ರ ಗೃಹ ಸಚಿವಾಲಯ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೆಲವೊಂದು ಸಣ್ಣಪುಟ್ಟಬದಲಾವಣೆ ಬಿಟ್ಟರೆ ಅನ್‌ಲಾಕ್ 1ರಲ್ಲಿ ಎಲ್ಲಾ ನಿಯಮಗಳು ಮುಂದುವರೆಯಲಿವೆ. ಕೊರೋನಾ ವೈರಸ್ ಅಬ್ಬರ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜು.31ರವರೆಗೂ ಶಾಲೆ- ಕಾಲೇಜು, ಶೈಕ್ಷಣಿಕ ಹಾಗೂ ಕೋಚಿಂಗ್ ಸಂಸ್ಥೆಗಳನ್ನು ಆರಂಭಿಸದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಜುಲೈ 1 ರಿಂದ ಅನ್‌ಲಾಕ್ 2.0: ಏನಿರತ್ತೆ? ಏನಿರಲ್ಲ?
ಇದೇ ವೇಳೆ, ಅಂತಾರಾಷ್ಟ್ರೀಯ ವಿಮಾನ ಪ್ರಯಾಣ, ಮೆಟ್ರೋ ರೈಲು, ಸಿನಿಮಾ ಮಂದಿರ, ಜಿಮ್ನಾಶಿಯಂ, ಈಜುಕೊಳ, ಮನರಂಜನಾ ಪಾರ್ಕ್, ಬಾರ್, ಆಡಿಟೋರಿಯಂ, ಸಾಮಾಜಿಕ- ರಾಜಕೀಯ- ಕ್ರೀಡಾ- ಮನರಂಜನಾ- ಸಾಂಸ್ಕೃತಿಕ- ಧಾರ್ಮಿಕ ಕಾರ್ಯಕ್ರಮಗಳಿಗೂ ನಿರ್ಬಂಧ ಮುಂದುವರಿಸಿದೆ.