Asianet Suvarna News Asianet Suvarna News

ಜೈಲಿನಿಂದ ಹೊರಬಂದ ವಿನಯ್ ಕುಲಕರ್ಣಿಗೆ ಹೆಬ್ಬಾಳ್ಕರ್ ಸ್ವಾಗತ

* ಒಂಭತ್ತು ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಬಂದ ವಿನಯ್ ಕುಲಕರ್ಣಿ
* ಶಾಲೆ ಆರಂಭಕ್ಕೆ ಸರ್ಕಾರದ ಸಿದ್ಧತೆ
* ಕರ್ನಾಟಕದ ಕೊರೋನಾ ಪರಿಸ್ಥಿತಿ ಏನು?

ಬೆಂಗಳೂರು(ಆ. 21)  ಯೋಗೇಶ್‌ ಗೌಡ ಕೊಲೆ ಫಾಲೋ ಅಪ್‌ ಅಂದ್ರೆ ಸುವರ್ಣನ್ಯೂಸ್‌, ಸುವರ್ಣನ್ಯೂಸ್‌ ಅಂದ್ರೆ ಕೊಲೆ ಪ್ರಕರಣದ ಫಾಲೋ ಅಪ್‌ ಎಂಬಂತಾಗಿತ್ತು. ಸತತ ವರದಿಗಳ ಬಳಿಕ ಸರ್ಕಾರವೂ ಆ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಪ್ರಮುಖ ಆರೋಪಿ ವಿನಯ್ ಕುಲಕರ್ಣಿ ಬಂಧನವಾಗಿತ್ತು.  9 ತಿಂಗಳು 16 ದಿನ ಜೈಲಿನಲ್ಲಿ ಕಳೆದು ಹೊರಬಂದ ಕೊಲೆ ಆರೋಪಿಗೆ ಸಿಕ್ಕ ಸ್ವಾಗತ ಎಂಥದ್ದು! 

ಕೊನೆಗೂ  ವಿನಯ್ ಕುಲರ್ಣಿಗೆ ಬಿಡುಗಡೆ ಭಾಗ್ಯ

ಯೋಗೇಶ್ ಗೌಡ ಕೊಲೆ ಪ್ರಕರಣವನ್ನು ನಾವು ಫಾಲೋ ಅಪ್‌ ಮಾಡ್ದೇ  ಇದ್ದಿದ್ದರೆ ಈ ಕೇಸ್ ಹಳ್ಳ ಹಿಡಿಯುತ್ತಿತ್ತು,  ನಾವು ಅಷ್ಟೊಂದು ಫಾಲೋಅಪ್ ಮಾಡಿರೋದ್ರಿಂದ ಸಿಬಿಐ ತನಿಖೆ ನಡೆದು ಇಲ್ಲಿವರೆಗೆ ಬಂದಿರೋದು ಅಂತಾ ಅನೇಕರು ಹೇಳ್ತಿದ್ದಾರೆ. ಈ ಕೇಸ್‌ ಹೇಗೆ ಆರಂಭವಾಯ್ತು? ಆಮೇಲೆ ಏನೆಲ್ಲಾ ನಡೆಯಿತು?  ಕರ್ನಾಟಕ ರಾಜ್ಯ ಕೇಬಲ್ ಅಸೋಸಿಯೇಶನ್ ವತಿಯಿಂದ ಇಂದು 21ನೇ ಅಂತಾರಾಷ್ಟ್ರೀಯ ಕೇಬಲ್ ಡೇ ಆಚರಣೆ ಮಾಡಲಾಯ್ತು. ಈ ಸಂದರ್ಭದಲ್ಲಿ ತಂಡದ ಸದಸ್ಯರಿಗೆ 6 ಲಕ್ಷದ ಹೆಲ್ತ್ ಇನ್ಯುರೆನ್ಸ್‌ಅನ್ನು ಕೂಡಾ ಘೋಷಿಸುವ ಜೊತೆಗೆ ಸಂಸ್ಥೆಯ ವೆಬ್‌ಸೈಟ್‌ಗೂ ಚಾಲನೆ ನೀಡಲಾಯ್ತು.  ಇನ್ನೊಂದು ಕಡೆ ಶಾಲೆ ಆರಂಭಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ