Asianet Suvarna News Asianet Suvarna News

News Hour : ಪ್ರಧಾನಿಗಳೇ ಹೇಳಿದ್ದಾರಂತೆ.. ಕತ್ತಿ ಮಾಸ್ಕ್ ಹಾಕಲ್ಲ.. ಬಾಕಿಯವರ ಜಾತ್ರೆ ನಿಂತಿಲ್ಲ!

* ಕರ್ನಾಟಕದಲ್ಲಿ ಮತ್ತೆ ಕೊರೋನಾ ಆರ್ಭಟ
* ಕತ್ತಿ ಉದ್ಧಟತನ..ನಾನು ಮಾಸ್ಕ್ ಹಾಕಲ್ಲ
*ಜನರಿಗೆ ಒಂದು, ಇವರಿಗೆ ಒಂದು ಕಾನೂನಾ?
* ಜಾತ್ರೆ, ಸ್ವಾಗತ, ಎಮ್ಮೆ ಮೆರವಣಿಗೆ.. ಕೊರೋನಾವೆ ಹೊರಟು ಹೋಯ್ತು!

ಬೆಂಗಳೂರು(ಜ. 19)  ಕೊರೋನಾ (Coronavirus) ಮೂರನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸರ್ಕಾರ (Karnataka Govt) ನುರಿತ ತಜ್ಞರ ಜತೆ ಮಾಹಿತಿ ಪಡೆದು ಸೋಂಕು ನಿಯಂತ್ರಣಕ್ಕೆ ಏನೆಲ್ಲಾ ಕ್ರಮಕೈಗೊಳ್ಳಬೇಕೋ ಅದನೆಲ್ಲಾ ಮಾಡುತ್ತಿದೆ. ಅಲ್ಲದೇ ಮಾಸ್ಕ್ (Mask)ಕಡ್ಡಾಯ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಕಟ್ಟನಿಟ್ಟಿನ ಸೂಚನೆ ಕೊಟ್ಟಿದೆ.ಆದ್ರೆ, ಆಡಳಿತ ಪಕ್ಷದ ಶಾಸಕರು, ಸಚಿವರುಗಳೇ ಕೋವಿಡ್ (Corona Rules) ರೂಲ್ಸ್‌ಗೆ ಕಿಮ್ಮತ್ತು ಕೊಡುತ್ತಿಲ್ಲ. ಅದರಲ್ಲೂ ಸಚಿವರಾಗಿರುವ ಉಮೇಶ್ ಕತ್ತಿ (Umesh Katti)ಅವರು ಮಾಸ್ಕ್ ಹಾಕುವುದಿಲ್ಲ
ಎಂದು ಉದ್ಧಟತನ ಮೆರೆದಿದ್ದಾರೆ.

Weekend Curfew ಬಿಜೆಪಿ ನಾಯಕರಿಂದಲೇ ಆಕ್ಷೇಪ, ಕುತೂಹಲ ಮೂಡಿಸಿದ ಬೊಮ್ಮಾಯಿ ತೀರ್ಮಾನ?

ಕೊರೋನಾ ನಿಯಮ ಪಾಲನೆ ಮಾಡಿ ಎಂದು ತಿಳಿಹೇಳಬೇಕಾದ ಜನಪ್ರತಿನಿಧಿಗಳೇ ನಿಯಮ ಉಲ್ಲಂಘನೆ ಮಾಡುವುದು ಅಲ್ಲದೇ ಅದಕ್ಕೆ ಸಮರ್ಥನೆ ಕೊಡುತ್ತಿದ್ದಾರೆ. ಇಲ್ಲಿದೆ  ನೋಡಿ ಉಡಾಫೆ ಗ್ಯಾಂಗ್ ಲಿಸ್ಟ್,,,ಜನ್ಮದಿನ  
ಆಚರಣೆಯೂ ಆಗಬೇಕು.. ಪ್ರತಿಭಟನೆಯೂ ಆಗಬೇಕು.... ಬಡಪಾಯಿಗಳ ಮೇಲೆ ಮಾತ್ರ ಕೇಸು ದಂಡ!.. ಕರ್ನಾಟಕದಲ್ಲಿ ಕೊರೋನಾದ್ದು ನಲವತ್ತು ಸಾವಿರ ಲೆಕ್ಕ.. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ.