Asianet Suvarna News Asianet Suvarna News

News Hour: 'ಪಾದಯಾತ್ರೆಯಿಂದ ಕಾಂಗ್ರೆಸ್‌ಗೆ ಕೊರೋನಾ ಬಂದಿದ್ದು ಲಸಿಕೆ ಬೇಕಿದೆ'

*ಕ್ಯಾಬಿನೆಟ್ ಸಭೆಯಲ್ಲಿ ಹೊರಬಿದ್ದ ಅಸಮಾಧಾನ
* ವಲಸಿಗರು ಅನ್ನೋದ್ಯಾಕೆ? ಕ್ಯಾಬಿನೆಟ್ ಒಳಗೆ ಭಾವುಕರಾದ ಮುನಿರತ್ನ
*ನಾವು ಎಲ್ಲಿಯೂ ಹೋಗಲ್ಲ, ಐಸಿಯುನಲ್ಲಿ ಇರುವ ಕಾಂಗ್ರೆಸ್‌ಗೆ ಹೋಗಲ್ಲ!
*  ಕರ್ನಾಟಕದಲ್ಲಿ  ಮುಗಿಯದ ಉಸ್ತುವಾರಿ ಜಟಾಪಟಿ

ಬೆಂಗಳೂರು(ಜ. 27)  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು.  ಹಳೆಯ ರಾಜಕಾರಣದ ಹೋರಾಟಗಳನ್ನು  ಮತ್ತೊಮ್ಮೆ  ನೆನಪು ಮಾಡಿಕೊಂಡ ಸಚಿವ ಮುನಿರತ್ನ  ನಮ್ಮನ್ನು ವಲಸಿಗರು ಅಂಥ  ಕರೆಯುವುದು ಯಾಕೆ? ಪಕ್ಷಕ್ಕೆ (BJP) ಮುಜುಗರ ತರುವ ಕೆಲಸ ಮಾಡಿದ್ದೇವೆಯಾ? ಎಂದು  ಪ್ರಶ್ನೆ ಮಾಡಿದರು. ಬಿಜೆಪಿ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ  ಹೇಳಿಕೆ ನಂತರ ಮಿತ್ರಮಂಡಳಿ ಸಚಿವರು  ನಾವು ಎಲ್ಲಿಯೂ ಹೋಗಲ್ಲ.. ಇಲ್ಲೇ ಇರುತ್ತೇವೆ ಎಂದು  ಮತ್ತೆ ಮತ್ತೆ ಹೇಳುವಂತಹ ಪರಿಸ್ಥಿತಿ ಬಂದಿದೆ.

ತವರು ಜಿಲ್ಲೆಯನ್ನು ಬಿಟ್ಟು ಬೇರೆ ಜಿಲ್ಲೆ ಉಸ್ತುವಾರಿ  ನೀಡಿದ್ದಕ್ಕೆ ಕೆಲವು ಸಚಿವರು ಅಸಮಾಧಾನ ಹೊರ ಹಾಕಿದ್ದಾರೆ. ಸಂಪುಟ ಸಭೆಯಲ್ಲಿ  ಸಚಿವ ಆನಂದ್ ಸಿಂಗ್ (Anand Singh) ಕೊಪ್ಪಳ (Koppala)ಜಿಲ್ಲೆ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಸಿಎಂ ಇಬ್ರಾಹಿಂ (CM Ibrahim) ಕಾಂಗ್ರೆಸ್ ತೊರೆಯುವ ನಿರ್ಧಾರ ಘೋಷಿಸಿದ್ದಾರೆ.  ಕರ್ನಾಟಕದಲ್ಲಿ ಕೊರೋನಾ ಒಂದು ಹಂತದ ನಿಯಂತ್ರಣದಲ್ಲಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ  

 

Video Top Stories