Asianet Suvarna News Asianet Suvarna News

ವಜ್ಜಲ್ ಮಗನ ಕಿರಿಕ್, ಸಂಸದರಿಗೆ ಘೇರಾವ್, ಮಕ್ಕಳಿಗೆ ಕಾಡುತ್ತಿದೆ ನಿಗೂಢ ಜ್ವರ

Sep 16, 2021, 11:43 PM IST

ಬೆಂಗಳೂರು(ಸೆ. 16)  ಬೆಂಗಳೂರಲ್ಲಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಮಗ ಪಾರ್ಕಿಂಗ್ ವಿಷಯಕ್ಕೆ ಕಿರಿಕ್ ಮಾಡ್ಕೊಂಡು ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ.   ಕೊರೋನಾ ಅಬ್ಬರದ ನಡುವೆಯೇ ಕರ್ನಾಟಕಕ್ಕೆ ಮತ್ತೊಂದು ಶಾಕ್ ಸಿಕ್ಕಿದ್ದು ನಿಗೂಢ ಜ್ವರಕ್ಕೆ ಮಕ್ಕಳು ತತ್ತರಿಸಿದ್ದಾರೆ. ಉತ್ತರ ಭಾರತದಲ್ಲಿ ಮಕ್ಕಳಿಗೆ ಕಾಡುತ್ತಿರುವ ಜ್ವರ ಯಾವುದೆಂದೇ ಗೊತ್ತಾಗಿಲ್ಲ.

ಅಧಿಕಾರಕ್ಕಾಗಿ ಯಾರ ಬೂಟು ನೆಕ್ಕುವ ಕೆಲಸ ಮಾಡಲಿಲ್ಲ... ಬೊಮ್ಮಾಯಿಗೆ ಸ್ವಾಮಿ ಠಕ್ಕರ್! 

ದೇವಾಲಯ ಧ್ವಂಸ  ವಿರೋಧಿಸಿ ಸಂಸದರಾದ ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯರಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡಿದ ಹಿಂದು ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಬೊಮ್ಮಾಯಿ ಮತ್ತು ಬಿಜೆಪಿ ಸರಕಾರದ ವಿರುದ್ಧ ಸಿಡಿದೆದ್ದ ಹಿಂದೂ ಜಾಗರಣ್ ವೇದಿಕೆ ಘೋಷಣೆ ಕೂಗಿದೆ. ಖಾಸಗಿ ಶಾಲೆಗಳ ಫೀಸ್ ವಿವಾದ ಇತ್ಯರ್ಥವಾದಂತೆ ಕಂಡುಬರುತ್ತಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ.