Asianet Suvarna News Asianet Suvarna News

ಒಂದು ಕೋವಿಡ್ ಕೇಸ್, 3 ದಿನ ಇಡೀ ನ್ಯೂಜಿಲೆಂಡ್ ಲಾಕ್‌ಡೌನ್..!

Aug 18, 2021, 10:00 AM IST

ಬೆಂಗಳೂರು (ಆ. 18): ವ್ಯಕ್ತಿಯೊಬ್ಬರಲ್ಲಿ ಸ್ಥಳೀಯವಾಗಿ ಹಬ್ಬಿದ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ನ್ಯೂಜಿಲೆಂಡ್‌ನಲ್ಲಿ ದೇಶಾದ್ಯಂತ ಮೂರು ದಿನ ಲಾಕ್ಡೌನ್‌ ಘೋಷಿಸಲಾಗಿದೆ. 

'ವಿದೇಶಗಳಲ್ಲಿ ಸೋಂಕಿನಿಂದ ಏನಾಗಿದೆ ಎಂಬ ವಿಷಯ ನಮ್ಮ ಕಣ್ಣ ಮುಂದಿದೆ. ಹೀಗಾಗಿ ನಾವು ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ದರಿಲ್ಲ. ಹೀಗಾಗಿ ಸೋಂಕಿತ ವ್ಯಕ್ತಿಯಾದ ಪತ್ತೆ ಆಕ್ಲೆಂಡ್‌ ಮತ್ತು ಆತ ಭೇಟಿ ನೀಡಿದ್ದ ಕೊರೋಮಂಡೆಲ್‌ನಲ್ಲಿ 7 ದಿನಗಳ ಕಾಲ ಲಾಕ್ಡೌನ್‌ ಜಾರಿ ಮಾಡಲಾಗುವುದು. ಉಳಿದ ಪ್ರದೇಶಗಳಲ್ಲಿ ಮೂರು ದಿನ ಲಾಕ್ಡೌನ್‌ ಜಾರಿಯಲ್ಲಿರಲಿದೆ' ಎಂದು ಪ್ರಧಾನಿ ಜೆಸಿಂಡಾ ಆ್ಯರ್ಡೆನ್‌ ಪ್ರಕಟಿಸಿದ್ದಾರೆ.