Asianet Suvarna News Asianet Suvarna News

Narendra Modi: ವಾಗ್ಯುದ್ಧಕ್ಕೆ ಮತಯುದ್ಧದಲ್ಲಿ ಉತ್ತರ ಕೊಡ್ತಾರಾ ಮೋದಿ..? ಖರ್ಗೆ ಕೋಟೆ.. ಮೋದಿ ಬೇಟೆ.. ಏನಿದರ ರಣರಹಸ್ಯ..?

ಮೋದಿ ದಕ್ಷಿಣ ದಂಡಯಾತ್ರೆಗೆ ಸಿದ್ಧವಾಗಿದೆ ಮುಹೂರ್ತ!
ಮೋದಿ ರಣಘೋಷದ ಬಳಿಕ ಬದಲಾಗುತ್ತಾ ಲೆಕ್ಕಾಚಾರ..?
ದಕ್ಷಿಣ ರಾಜ್ಯಗಳ ಮೇಲೆ ಮೋದಿ ಕಣ್ಣು..!ಮುಂದೇನು..?
 

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭದ್ರಕೋಟೆಯಿಂದಲೇ ಮೊಳಗಲಿದೆಯಂತೆ ಮೋದಿ(Narendra Modi) ರಣಕಹಳೆ. ಲೋಕಸಮರಕ್ಕೆ ದಿನಗಣನೆ ಆರಂಭವಾಗಿದೆ. ಕದನರಂಗಕ್ಕೆ ಅದೆಂತೆಂಥಾ ರಣಕಲಿಗಳು ಧುಮುಕಲಿದ್ದಾರೆ ಅನ್ನೋ ಕುತೂಹಲ ಕ್ಷಣಕ್ಷಣಕ್ಕೂ ಹೆಚ್ಚಾಗ್ತಲೇ ಇದೆ. ಅದರಲ್ಲೂ, ರಾಜ್ಯದಲ್ಲಿ ಅದೇನೇನೆಲ್ಲಾ ಅಲ್ಲೋಲ ಕಲ್ಲೋಲ, ರಾಜಕೀಯ ಕೋಲಾಹಲ ಉಂಟಾಗುತ್ತೋ ಅನ್ನೋ ರಣಕೌತುಕವಿದೆ. ರಾಷ್ಟ್ರ ರಾಜಕಾರಣದಲ್ಲಿ ಮೋದಿ ಅವರ ಪ್ರಭಾವ ಎದ್ದು ಕಾಣ್ತಾ ಇದೆ  2014ರಲ್ಲಿ ಶುರುವಾದ ಮೋದಿ ಸುನಾಮಿ, ಈಗಲೂ ತಣ್ಣಗಾಗಿಲ್ಲ ಅಂತ, ಸಮೀಕ್ಷೆಗಳು ಹೇಳ್ತಿದ್ದಾವೆ. ಈ ಮಾತು ಎಷ್ಟು ಸತ್ಯ ಅನ್ನೋದು ಚುನಾವಣೆ ಮುಗಿದ ಮೇಲೆ ನಮಗೇ ಗೊತ್ತಾಗುತ್ತೆ. ಕಾಂಗ್ರೆಸ್(Congress) ಪಕ್ಷ ಮೋದಿ ಅವಧಿಯಲ್ಲಿ ತೀರಾ ವೀಕ್ ಆಗಿದೆ. ಕರ್ನಾಟಕದಲ್ಲಿ(Karnataka) ಕಾಂಗ್ರೆಸ್ ಬಲವೇನೋ ಬೆಟ್ಟದಷ್ಟಿದೆ, ಆದ್ರೆ, ಲೋಕಸಂಗ್ರಾಮದಲ್ಲಿ ಮೋದಿ ಅವರನ್ನ ಎದುರಿಸಬಲ್ಲ ಸಾಮರ್ಥ್ಯದಲ್ಲಿ ಕೊರತೆ ಇತ್ತು. ಆ ಕೊರತೆ ನೀಗಿಸಿಕೊಳ್ಳೋಕೆ ನಿರ್ಧರಿಸಿದ್ದ ಕಾಂಗ್ರೆಸ್, ಹೊಸದೊಂದು ಪ್ರಯೋಗ ಮಾಡ್ತು. ಆ ಪ್ರಯೋಗದ ಕಾರಣಕ್ಕೆ, ಕಾಂಗ್ರೆಸ್‌ಗೆ ಹೊಸ ಅಧ್ಯಕ್ಷರು ಸಿಕ್ಕಿದ್ರು. ಅವರ ಹೆಸರು, ಮಲ್ಲಿಕಾರ್ಜುನ ಖರ್ಗೆ(Mallikarjun Kharge). ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆ ದಕ್ಕಿತು. ಆಗಿಂದ ಖರ್ಗೆ ತಮ್ಮ ಶಕ್ತಿ ಸಾಮರ್ಥ್ಯವನ್ನ ಮೋದಿ ಅವರ ಎದುರು ಪ್ರದರ್ಶಿಸೋಕೆ ನಿಂತ್ರು. ಅಲ್ಲಿಂದಲೇ ಶುರುವಾಯ್ತು ನೋಡಿ, ಮೋದಿ ವರ್ಸಸ್ ಖರ್ಗೆ, ಮಾತಿನ ಸಮರ.. ಮಹಾಸಮರ.

ಇದನ್ನೂ ವೀಕ್ಷಿಸಿ:  ಪ್ರೀತಿಸಿ ಮದುವೆಯಾದವಳೇ ಸುಪಾರಿ ಕೊಟ್ಟಳಾ..? ಅವನ ಕೊಲೆಗೆ ಹೆಂಡತಿಯೇ ಮುಹೂರ್ತ ಇಟ್ಟಳಾ..?