Asianet Suvarna News Asianet Suvarna News

ಸಶಸ್ತ್ರಪಡೆ ಧ್ವಜ ದಿನಾಚರಣೆ: ರಾಜೀವ್ ಚಂದ್ರಶೇಖರ್ ಒಗ್ಗಟ್ಟಿನ ಸಂದೇಶ

ಇದೇ ಶನಿವಾರ(ಡಿ.07) ದೇಶಾದ್ಯಂತ ಸಶಸ್ತ್ರಪಡೆಗಳ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ,  ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್  ಕಳೆದ ವರ್ಷ ನೀಡಿದ ಸಂದೇಶವನ್ನು ಜನರ ಗಮನಕ್ಕೆ ತರಲು ಮತ್ತೊಮ್ಮೆ ನಿಮ್ಮ ಮುಂದೆ ಇಡುತ್ತಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಸಶಸ್ತ್ರಪಡೆಗಳ ಧ್ವಜ ದಿನಾಚರಣೆ ಆಚರಿಸಬೇಕು. ಸೈನಿಕರ ನೈತಿಕ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ರಾಜೀವ್ ಚಂದ್ರಶೇಖರ್ ಕೋರಿದ್ದಾರೆ. 

ಬೆಂಗಳೂರು(ಡಿ.05): ಇದೇ ಶನಿವಾರ(ಡಿ.07) ದೇಶಾದ್ಯಂತ ಸಶಸ್ತ್ರಪಡೆಗಳ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ, ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್  ಕಳೆದ ವರ್ಷ ನೀಡಿದ ಸಂದೇಶವನ್ನು ಜನರ ಗಮನಕ್ಕೆ ತರಲು ಮತ್ತೊಮ್ಮೆ ನಿಮ್ಮ ಮುಂದೆ ಇಡುತ್ತಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಸಶಸ್ತ್ರಪಡೆಗಳ ಧ್ವಜ ದಿನಾಚರಣೆ ಆಚರಿಸಬೇಕು. ಸೈನಿಕರ ನೈತಿಕ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ರಾಜೀವ್ ಚಂದ್ರಶೇಖರ್ ಕೋರಿದ್ದಾರೆ. 

ಸಂಸದ ರಾಜೀವ್ ಚಂದ್ರಶೇಖರ್ ಮನವಿಯ ವಿಡಿಯೋ ಇಲ್ಲಿದೆ.. 
‘‘ಸಮವಸ್ತ್ರದಲ್ಲಿರುವ ಯೋಧ ಹಾಗೂ ಆತ/ಆಕೆಯ ಕುಟುಂಬ ವರ್ಗದ ಮೇಲೆ ಪ್ರತಿಯೊಬ್ಬ ಭಾರತೀಯನಿಗೂ ಗೌರವವಿದೆ. ದೇಶಕ್ಕಾಗಿ ಸೈನಿಕರ ಸೇವೆ, ಅವರ ಕರ್ತವ್ಯನಿಷ್ಠೆಗೆ ಇಡೀ ದೇಶ ಅವರಿಗೆ ಋಣಿ. ಯುದ್ಧ, ನೈಸರ್ಗಿಕ ವಿಕೋಪ ಮುಂತಾದ ಸಂದರ್ಭದಲ್ಲಿ ನಮ್ಮ ಯೋಧರು ಪ್ರದರ್ಶಿಸುವ ಕರ್ತವ್ಯನಿಷ್ಠೆಗೆ ದೇಶ ಹೆಮ್ಮೆಪಡುತ್ತದೆ.

ತಮ್ಮ ಪ್ರೀತಿಪಾತ್ರರರಿಂದ ದೂರವಿದ್ದು, ನಮ್ಮನ್ನು ರಕ್ಷಿಸುವ ಯೋಧರ ಋಣ ತೀರಿಸುವುದು ನಮ್ಮೆಲ್ಲರ ಕರ್ತವ್ಯ. ಇದೇ ಡಿ.07ರಂದು ರಾಷ್ಟ್ರೀಯ ಸಶಸ್ತ್ರಪಡೆಗಳ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ದಿನವನ್ನು ಪ್ರತಿಯೊಬ್ಬ ಭಾರತೀಯ ಹೆಮ್ಮೆಯಿಂದ ಆಚರಿಸಬೇಕಿರುವುದು ಆದ್ಯ ಕರ್ತವ್ಯ.

ಈ ಹಿನ್ನೆಲೆಯಲ್ಲಿ ಮೂರೂ ಸೇನಾಪಡೆಗಳನ್ನು ಸ್ಮರಿಸಿ ಸಶಸ್ತ್ರಪಡೆಗಳ ಧ್ವಜ ದಿನಾಚರಣೆಯನ್ನು ಆಚರಿಸೋಣ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸೇನಾಪಡೆಗಳ ಧ್ವಜ ಲಭ್ಯವಿದ್ದು, ಇವುಗಳನ್ನು ಖರೀದಿಸಿ ಸೈನಿಕರ ಜೊತೆ ನಿಲ್ಲೋಣ. ಅಲ್ಲದೇ ಸಶಸ್ತ್ರಪಡೆಗಳ ಧ್ವಜ ದಿನಾಚರಣೆ ದೇಣಿಗೆ ಕೂಡ ಸಾಧ್ಯವಿದ್ದು, ಇದಕ್ಕೆ ದೇಣಿಗೆ ನೀಡಿ ಹುತಾತ್ಮ ಸೇನಾ ಯೋಧರ ಕುಟುಂಬಕ್ಕೆ, ಯುದ್ಧದಲ್ಲಿ ಗಾಯಗೊಂಡ ಸೈನಿಕರ ನೆರವಿಗೆ ಧಾವಿಸೋಣ.

KSB.GOV.IN ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಕೂಡ ದೇಣಿಗೆ ನೀಡಬಹುದಾಗಿದ್ದು, ARMEDFORCESFLAGDAYFUND@SBI ಗೆ ದೇಣಿಗೆ ನೀಡಬಹುದಾಗಿದೆ. ಅಲ್ಲದೇ SBI ಆರ್.ಕೆ.ಪುರಂ ಶಾಖೆಯ 34420400623 ಅಕೌಂಟ್’ಗೆ ಚೆಕ್ ಕೂಡ ಕಳುಹಿಸಬಹುದು.

ಇಷ್ಟೇ ಅಲ್ಲದೇ ಸಶಸ್ತ್ರಪಡೆಗಳ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕೂಡ ಮಾಡಿ ಸಶಸ್ತ್ರಪಡೆ ಧ್ವಜ ದಿನಾಚರಣೆಯಲ್ಲಿ ಭಾಗವಹಿಸಿ. ಜೈ ಹಿಂದ್’’..