Asianet Suvarna News Asianet Suvarna News

'ಬೆಳಗಾವಿ ನಮ್ಮದು' ಕನ್ನಡದಲ್ಲೇ ಶಿವಸೇನೆಗೆ ಚಂದ್ರಶೇಖರ್ ಪಾಠ

ಶಿವಸೇನೆಗೆ ಕನ್ನಡದಲ್ಲೇ ಕ್ಲಾಸ್ ತೆಗೆದುಕೊಂಡ ಜಿಸಿ ಚಂದ್ರಶೇಖರ್/ರಾಜ್ಯಸಭೆಯಲ್ಲಿ ಜಿ.ಸಿ ಚಂದ್ರಶೇಖರ್ ಪ್ರಸ್ತಾಪ/ ಯಾವುದೇ ವಿವಾದ ಸಂಘರ್ಷದಿಂದ ಬಹೆಗರಿಯುವುದಿಲ್ಲ/ ಗಾಂಧಿಜಿಯವರ ಅಹಿಂಸಾ ಸಂದೇಶ ಇಡಿ ಪ್ರಪಂಚಕ್ಕೆ ಮಾದರಿಯಾಗಿದೆ/ 1956ರ ಕೇಂದ್ರವಾರು ಭಾಷಾವಾರು ವಿಂಗಡಣೆ ಆದಾಗಿನಿಂದಲೂ ಬೆಳಗಾವಿ ಕರ್ನಾಟಕದ ಅಂಗವಾಗಿದೆ

ನವದೆಹಲಿ(ಮಾ. 18) ಶೂನ್ಯವೇಳೆಯಲ್ಲಿ ಬೆಳಗಾವಿ ಗಡಿ ವಿಷಯ ಪ್ರಸ್ತಾಪಿಸಿ  ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಮಾತನಾಡಿದ್ದಾರೆ.  ಯಾವುದೇ ವಿವಾದ ಸಂಘರ್ಷದಿಂದ ಬಗೆಹರಿಯುವುದಿಲ್ಲ. ಭಾಷಾವಾರು ಪ್ರಾಂತ್ಯ ವಿಂಗಡಣೆ ಆದಾಗಿನಿಂದಲೂ ಬೆಳಗಾವಿ ಕರ್ನಾಟಕದ ಅಂಗವಾಗಿದೆ ಮಹಾಜನ್ ವರದಿಯಲ್ಲೂ ಕರ್ನಾಟಕದ ಅವಿಭಾಜ್ಯ ಅಂಗ ಅಂತ ಹೇಳಲಾಗಿದೆ. ರಾಜಕೀಯ ಲಾಭಕ್ಕಾಗಿ ಗಡಿವಿವಾದ ಮಾಡಲಾಗುತ್ತಿದೆ ಎಂದಿದ್ದಾರೆ.

ನಿಲ್ಲದ ಶಿವಸೇನೆ ಪುಂಡಾಟ, ಬಸ್‌ ಗಳಿಗೆ ಕಲ್ಲು

ನಾವು ನವೆಂಬರ್ ಒಂದನೇ ದಿನಾಂಕವನ್ನು ಸ್ವಾಭಿಮಾನ ದಿನವಾಗಿ  ಆಚರಿಸಿದರೆ ಮಹಾರಾಷ್ಟ್ರದವರು ಆ ದಿನವನ್ನ  ಕರಾಳದಿನ ಮಾಡುವುದಾಗಿ ಸಂಪುಟದಲ್ಲಿ ತೀರ್ಮಾನ ಮಾಡ್ತಾರೆ. 'ಸೀಮಾ ಸಂಕಲ್ಪ' ಎಂಬ ಹೆಸರಿನಲ್ಲಿ ಬೆಳಗಾವಿಯನ್ನ ವಶ ಪಡೆಸಿಕೊಳ್ಳುತ್ತೆವೆ ಹೇಳುತ್ತಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದೆ ಎಂದಿದ್ದಾರೆ.