Asianet Suvarna News Asianet Suvarna News

ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್ ಹತ್ಯೆ

Sep 25, 2021, 10:56 AM IST

ದೆಹಲಿ ಕೋರ್ಟ್(Court) ಆವರಣದಲ್ಲಿ ನಡೆದ ಕೊಲೆಗಳು ಜನರನ್ನು ಬೆಚ್ಚಿಬೀಳಿಸಿದೆ. ದ್ವೇಷ ಮಿತಿ ಮೀರಿದ್ರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ. ಗ್ಯಾಂಗ್‌ಸ್ಟರ್ ಜಿತೇಂದ್ರ ಗೋಗಿಯನ್ನು ಗುರಿಯಾಗಿಸಿಕೊಂಡು ಮಾಡಲಾದ ದಾಳಿಗೆ ದೆಹಲಿಯ(Delhi) ರೋಹಿಣಿ ಕೋರ್ಟ್ ಸಾಕ್ಷಿಯಾಗಿದೆ. ಗ್ಯಾಂಗ್‌ಸ್ಟರ್ ಜಿತೇಂದ್ರ ಸೇರಿ 3 ಜನರು ಹತ್ಯೆಯಾಗಿದ್ದಾರೆ.

ದೆಹಲಿ ಕೋರ್ಟ್‌ನಲ್ಲಿ ಗ್ಯಾಂಗ್‌ವಾರ್: ಗ್ಯಾಂಗ್‌ಸ್ಟರ್‌ ಮೇಲೆ ದಾಳಿ, 6 ಸಾವು!

ಗ್ಯಾಂಗ್‌ಸ್ಟರ್‌ನ ಆಗಂತುಕರು ಕೊಂದುಹಾಕಿದ್ದರೆ ಆ ಆಗಂತುಕರನ್ನು ಪೊಲೀಸರು ಶೂಟ್ ಮಾಡಿದ್ದಾರೆ. ದಾಳಿಯಲ್ಲಿ ಒಬ್ಬರು ವಕೀಲೆ ಸೇರಿ 6 ಜನರು ಗಾಯಗೊಂಡಿದ್ದಾರೆ. ಈ ಕೃತ್ಯಕ್ಕೆ ಪರ್ಫೆಕ್ಟ್ ಪ್ಲಾನ್ ಮಾಡಲಾಗಿತ್ತು. ಗನ್ ಸಮೇತ ಕೋರ್ಟ್ ಒಳಗೆ ಬರೋದು ಅಷ್ಟು ಸುಲಭವಿರಲಿಲ್ಲ. ಆದರೆ ಶೂಟ್ ಮಾಡಿದವರು ವಕೀಲರ ವೇಷದಲ್ಲಿ ಬಂದಿದ್ದರು. 

Video Top Stories