Asianet Suvarna News Asianet Suvarna News

ಕೇಂದ್ರ ಸಚಿವರ ಬಂಧನ, ತಡ​ರಾತ್ರಿ ಕೋರ್ಟ್‌​ನಿಂದ ಜಾಮೀ​ನು!

‘ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದ ಮಾಹಿತಿ ಇಲ್ಲದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಕಪಾಳಮೋಕ್ಷ ಮಾಡುತ್ತಿದ್ದೆ’ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಮಹಾರಾಷ್ಟ್ರ ಪೊಲೀಸರು ಮಂಗಳವಾರ ಮಧ್ಯಾ​ಹ್ನ ಬಂಧಿಸಿದ್ದಾರೆ. ಆದರೆ ತಡ​ರಾತ್ರಿ ರಾಣೆ ಅವ​ರಿಗೆ ಜಾಮೀನು ಲಭಿ​ಸಿ​ದೆ.

ಮುಂಬೈ(ಆ.25): ‘ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷದ ಮಾಹಿತಿ ಇಲ್ಲದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಕಪಾಳಮೋಕ್ಷ ಮಾಡುತ್ತಿದ್ದೆ’ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಮಹಾರಾಷ್ಟ್ರ ಪೊಲೀಸರು ಮಂಗಳವಾರ ಮಧ್ಯಾ​ಹ್ನ ಬಂಧಿಸಿದ್ದಾರೆ. ಆದರೆ ತಡ​ರಾತ್ರಿ ರಾಣೆ ಅವ​ರಿಗೆ ಜಾಮೀನು ಲಭಿ​ಸಿ​ದೆ.

ಅಧಿಕಾರದಲ್ಲಿದ್ದಾಗ ಕೇಂದ್ರ ಸಚಿವರೊಬ್ಬರ ಬಂಧನ 20 ವರ್ಷದಲ್ಲೇ ಮೊದಲ ಬಾರಿ ನಡೆದಿದ್ದು, ಮಾಜಿ ಮಿತ್ರರಾದ ಬಿಜೆಪಿ ಮತ್ತು ಶಿವಸೇನೆ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷಕ್ಕೂ ನಾಂದಿ ಹಾಡಿದೆ.

Video Top Stories