Asianet Suvarna News Asianet Suvarna News

‘ಅಮೆಜಾನ್‌’ ಈಸ್ಟ್‌ ಇಂಡಿಯಾ ಕಂಪನಿ ಇದ್ದಂತೆ: ಪಾಂಚಜನ್ಯ!

ಆರ್‌ಎಸ್‌ಎಸ್‌ ಜೊತೆ ನಂಟು ಹೊಂದಿರುವ ಪಾಂಚಜನ್ಯ ನಿಯತಕಾಲಿಕೆ ಇ- ಕಾಮರ್ಸ್‌ ದೈತ್ಯ ಅಮೆಜಾನ್‌ ಅನ್ನು ಬ್ರಿಟಿ​ಷರ ಈಸ್ಟ್‌ ಇಂಡಿಯಾ ಕಂಪನಿಗೆ ಹೋಲಿಸಿದೆ. ಅ.3ರಂದು ಪ್ರಕಟವಾಲಿರುವ ಆವೃತ್ತಿಯ ಮುಖಪುಟ ಲೇಖನದಲ್ಲಿ ಅಮೆಜಾನ್‌ ವಿರುದ್ಧ ಟೀಕೆಯ ಮಳೆಯಗರೆಯಲಾಗಿದೆ

ನವದೆಹಲಿ(ಸೆ.28): ಆರ್‌ಎಸ್‌ಎಸ್‌ ಜೊತೆ ನಂಟು ಹೊಂದಿರುವ ಪಾಂಚಜನ್ಯ ನಿಯತಕಾಲಿಕೆ ಇ- ಕಾಮರ್ಸ್‌ ದೈತ್ಯ ಅಮೆಜಾನ್‌ ಅನ್ನು ಬ್ರಿಟಿ​ಷರ ಈಸ್ಟ್‌ ಇಂಡಿಯಾ ಕಂಪನಿಗೆ ಹೋಲಿಸಿದೆ. ಅ.3ರಂದು ಪ್ರಕಟವಾಲಿರುವ ಆವೃತ್ತಿಯ ಮುಖಪುಟ ಲೇಖನದಲ್ಲಿ ಅಮೆಜಾನ್‌ ವಿರುದ್ಧ ಟೀಕೆಯ ಮಳೆಯಗರೆಯಲಾಗಿದೆ.

18ನೇ ಶತಮಾನದಲ್ಲಿ ಈಸ್ಟ್‌ ಇಂಡಿಯಾ ಕಂಪನಿ ಭಾರತವನ್ನು ವಶಕ್ಕೆ ಪಡೆದ ರೀತಿಯಲ್ಲಿಯೇ ಅಮೆಜಾನ್‌ ತನ್ನ ಚಟುವಟಿಕೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಅದು ಭಾರತದಲ್ಲಿ ಏಕಸ್ವಾಮ್ಯ ಮಾರುಕಟ್ಟೆಯನ್ನು ಸ್ಥಾಪಿಸಲು ಬಯಸಿದೆ.

ಈ ಮೂಲಕ ಭಾರತದ ಆರ್ಥಿಕತೆ, ರಾಜಕೀಯ ಮತ್ತು ಜನರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಬಳಿಸುತ್ತಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ದೇಶದ ಸಂಸ್ಕೃತಿಗೆ ವಿರುದ್ಧವಾದ ಟೀವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಟೀಕಿಸಲಾಗಿದೆ.

Video Top Stories