Asianet Suvarna News Asianet Suvarna News

ಭವಾನಿಪುರ ವಿಧಾನಸಭಾ ಉಪ ಚುನಾವಣೆ: ದೀದಿಗೆ ಕಾಂಗ್ರೆಸ್‌ ಪರೋಕ್ಷ ಬೆಂಬಲ!

Sep 11, 2021, 9:53 AM IST

ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಉಪಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ಅಧಿಕಾರಕ್ಕೇರಿರುವ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಗಾದಿ ಉಳಿಸಿಕೊಳ್ಳಲು ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಹೀಗಿರುವಾಗ ಮಮತಾ ಬ್ಯಾನರ್ಜಿ ನಾಮಪತ್ರ ಸಲ್ಲಿಸಿದ್ದಾರೆ. ಅತ್ತ ದೀದೀ ವಿರುದ್ಧ ಬಿಜೆಪಿಯು ಪ್ರಿಯಾಂಕ್ ರನ್ನು ಕಣಕ್ಕಿಳಿಸಿದೆ.

ಇನ್ನು ಈ ಚುನಾವಣರೆಯಲ್ಲಿ ಕಾಂಗ್ರೆಸ್‌ ಮಮತಾ ಬ್ಯಾನರ್ಜಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದು, ಕೈ ಪಕ್ಷ ಈ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ.