ಉತ್ತರದಲ್ಲಿ ಸಿಡಿಲಾಘಾತ, ಹಿಮಾಲಯದಲ್ಲಿ ಮೇಘ ಸ್ಟೋಟ, ಪ್ರಕೃತಿ ಮುನಿಸಿಗೆ ಕಾರಣವೇನು..?
ಉತ್ತರಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಿಡಿಲು ಬಡಿತಕ್ಕೆ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶದ 16 ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಿಡಿಲಿಗೆ 41 ಜನರು ಬಲಿಯಾಗಿದ್ದಾರೆ.
ನವದೆಹಲಿ (ಜು. 14): ಉತ್ತರಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಿಡಿಲು ಬಡಿತಕ್ಕೆ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶದ 16 ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಿಡಿಲಿಗೆ 41 ಜನರು ಬಲಿಯಾಗಿದ್ದಾರೆ. ಜೈಪುರ ಕೋಟೆಯ ವೀಕ್ಷಣಾ ಗೋಪುರದ ಮೇಲೆ ಮೇಲೆ ಸೆಲ್ಫಿ ಕ್ಲಿಕ್ಕಿಸುತ್ತಿದ್ದ 11 ಪ್ರವಾಸಿಗರಿಗೆ ಸಿಡಿಲು ತಾಗಿ ಮೃತಪಟ್ಟಿದ್ದಾರೆ.
ಇನ್ನು ಹಿಮಾಚಲ ಪ್ರದೇಶದಾದ್ಯಂತ ಮೇಘಸ್ಫೋಟದ ಕಾರಣ ಸುರಿದ ಭಾರೀ ಮಳೆಯಿಂದಾಗಿ ಮಹಿಳೆ, ಬಾಲಕಿ ಮೃತಪಟ್ಟು, 14 ಮಂದಿ ಸ್ಥಳೀಯರು ನಾಪತ್ತೆಯಾಗಿದ್ದಾರೆ. ಹಲವಾರು ಗ್ರಾಮ ಮತ್ತು ನಗರಗಳು ಪ್ರವಾಹ ಭೀತಿಗೆ ತುತ್ತಾಗಿವೆ. ಉತ್ತರದಲ್ಲಿ ಸಿಡಿಲಾಘಾತ, ಹಿಮಾಲಯದಲ್ಲಿ ಮೇಘ ಸ್ಟೋಟ, ಪ್ರಕೃತಿ ಮುನಿಸಿಗೆ ಕಾರಣವೇನು..?