Asianet Suvarna News Asianet Suvarna News

ತಾನೇ ತಯಾರಿಸಿದ ಹೆಲಿಕಾಪ್ಟರ್‌ನಿಂದ ದುರಂತ ಅಂತ್ಯ ಕಂಡ 24 ರ ಯುವಕ!

-ಸ್ವಂತ ಹೆಲಿಕಾಪ್ಟರ್ ತಯಾರಿಸಿದ ಮಹಾರಾಷ್ಟ್ರದ ಶೇಖ್ ಇಸ್ಮಾಯಿಲ್

- ಆಗಸ್ಟ್ 15 ರಂದು ಉದ್ಘಾಟನೆಗೂ ತಯಾರಾಗಿದ್ದ

- ಹೆಲಿಕಾಪ್ಟರ್ ಟೆಸ್ಟಿಂಗ್ ವೇಳೆ ನಡೆಯಿತು ದುರಂತ 

ಬೆಂಗಳೂರು (ಆ. 13): ಏನನ್ನಾದರೂ ಸಾಧಿಸಬೇಕು ಎಂಬ ಛಲದಲ್ಲಿದ್ದ ಈ ಯುವಕ, ಸಾಧಿಸುವ ಹಾದಿಯಲ್ಲಿ ಸಾವನ್ನಪ್ಪಿರುವ ಕರುಣಾಜನಕ ಕಥೆಯಿದು. 24 ವರ್ಷದ ಶೇಖ್ ಇಸ್ಮಾಯಿಲ್ ಎಂಬ ಯುವಕ 8 ನೇ ತರಗತಿಯವರೆಗೆ ಓದಿದ್ದ.

ಖಾಕಿ ಡ್ರೆಸ್, ಕೂಲಿಂಗ್ ಗ್ಲಾಸ್, ಟಪ್ಪಾಗುಚ್ಚಿ ಸ್ಟೆಪ್ಸ್: ಪೋಲಿಸಪ್ಪನ ಡ್ಯಾನ್ಸ್ ಗಮ್ಮತ್ತು..!

ತಂತ್ರಜ್ಞಾನದ ಬಗ್ಗೆ ಇನ್ನಿಲ್ಲದ ಆಸಕ್ತಿ ಇತ್ತು. ಹೇಗಾದರೂ ಮಾಡಿ ತಾನೇ ಒಂದು ಹೆಲಿಕಾಪ್ಟರ್ ತಯಾರು ಮಾಡುವ ಛಲ ತೊಟ್ಟಿದ್ದ. ಸ್ಥಳೀಯ ವಸ್ತುಗಳನ್ನು ಬಳಸಿಕೊಂಡು 2 ವರ್ಷದಿಂದ ತಯಾರಿಕೆಯಲ್ಲಿ ತೊಡಗಿದ್ದ. ಇದೇ ಆಗಸ್ಟ್‌ 15 ನೇ ತಾರೀಖು ಹೆಲಿಕಾಪ್ಟರ್ ಉದ್ಘಾಟನೆಗೆ ಸಿದ್ಧನಾಗಿದ್ದ. ದುರಾದೃಷ್ಟವಶಾತ್ ಪರೀಕ್ಷೆ ವೇಳೆ ರೆಕ್ಕೆಗಳು ಮುರಿದು, ಹೆಲಿಕಾಪ್ಟರ್ ಗಿರಕಿ ಹೊಡೆದು ಬಿದ್ದಿತ್ತು. ಈ ವೇಳೆ ಇಸ್ಮಾಯಿಲ್ ತಲೆಗೆ ತೀವ್ರ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ.

Video Top Stories