ವಿಷಸರ್ಪಗಳೊಂದಿಗೆ ಯುವಕನ ಬಿಂದಾಸ್‌ ಸರಸ: ನಾಗನಿಗೆ ಕಿಸ್‌ ಕೊಟ್ಟವ ಅಂದರ್‌!

ಕೆಲವರು ವಿಷಕಾರಿ ಹಾವಿನೊಂದಿಗೆ ಸರಸವಾಡಲು ಇಷ್ಟಪಡುತ್ತಾರೆ. ಹೀಗೆ ಸಾಹಸ ಮಾಡಲು ಹೋಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಅಪಾಯದ ಅರಿವಿದ್ದರೂ ಕೂಡ ಕೆಲವರು ಹಾವಿನೊಂದಿಗೆ ಸರಸವಾಡುವುದನ್ನು ಮಾತ್ರ ಬಿಡುವುದಿಲ್ಲ.

First Published Jun 27, 2022, 11:50 AM IST | Last Updated Jun 27, 2022, 11:50 AM IST

ಹಾವು ಎಂದರೆ ನಾವೆಲ್ಲ ಭಯಬಿದ್ದು ದೂರ ಓಡೋದೆ ಹೆಚ್ಚು. ಆದರೆ ಕೆಲವರು ವಿಷಕಾರಿ ಹಾವಿನೊಂದಿಗೆ ಸರಸವಾಡಲು ಇಷ್ಟಪಡುತ್ತಾರೆ. ಹೀಗೆ ಸಾಹಸ ಮಾಡಲು ಹೋಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಅಪಾಯದ ಅರಿವಿದ್ದರೂ ಕೂಡ ಕೆಲವರು ಹಾವಿನೊಂದಿಗೆ ಸರಸವಾಡುವುದನ್ನು ಮಾತ್ರ ಬಿಡುವುದಿಲ್ಲ. ಹೀಗೆ ಹಾವಿನೊಂದಿಗೆ ಸರಸವಾಡಲು ಹೋಗಿ ನಾಗರ ಹಾವಿಗೆ ಮುತ್ತಿಟ್ಟ ಯುವಕನೋರ್ವನನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯ 22 ವರ್ಷದ ಪ್ರದೀಪ್‌ ಈ ಸಾಹಸ ಮಾಡಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗುವ ಆಸೆಯಿಂದ ಈ ಸಾಹಸ ಮಾಡಿದ್ದ ಈತ ತಾನು ಹಾವಿಗೆ ಮುತ್ತಿಡುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾಗೆ ಹಾಕಿದ್ದ. ಆದರೆ ಈ ವಿಡಿಯೋ ನೋಡಿದ ಪೊಲೀಸರು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಈತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.