Asianet Suvarna News Asianet Suvarna News

ಲಾಕ್‌ಡೌನ್‌ ನೆರವು: ಮಹಿಳಾ ಕಾಂಗ್ರೆಸ್‌ನಿಂದ 25 ಲಕ್ಷ ಸ್ಯಾನಿಟರಿ ಪ್ಯಾಡ್ ವಿತರಣೆ

ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಮಹಿಳೆಯರ ನೆರವಿಗೆ ನಿಂತಿದೆ. 25 ಲಕ್ಷ ಸ್ಯಾನಿಟರಿ ಪ್ಯಾಡ್ ಹಂಚಲು ನಿರ್ಧರಿಸಲಾಗಿದೆ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೇಳಿದ್ದಾರೆ. 

First Published May 30, 2020, 12:12 PM IST | Last Updated May 30, 2020, 12:12 PM IST

ಬೆಂಗಳೂರು (ಮೇ. 30): ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಮಹಿಳೆಯರ ನೆರವಿಗೆ ನಿಂತಿದೆ. 25 ಲಕ್ಷ ಸ್ಯಾನಿಟರಿ ಪ್ಯಾಡ್ ಹಂಚಲು ನಿರ್ಧರಿಸಲಾಗಿದೆ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೇಳಿದ್ದಾರೆ. 

ಮುಂಬೈನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 36 ಸಾವಿರದ ಗಡಿ ದಾಟಿದೆ. ಶೇ. 99 ರಷ್ಟು ICU ಬೆಡ್‌ಗಳು ಭರ್ತಿಯಾಗಿವೆ. ದೆಹಲಿಯಿಂದ ಹರ್ಯಾಣದಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ. ದೆಹಲಿ ಗಡಿಯನ್ನು ಹರ್ಯಾಣ ಸರ್ಕಾರ ಬಂದ್ ಮಾಡಿದೆ.  ಮಧ್ಯ ಪ್ರದೇಶದ ಇಂದೋರ್‌ನಲ್ಲಿ 110 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಗೆದ್ದು ಬಂದವರಿಗೆ ಹೂಮಳೆಗೈಯಲಾಗಿದೆ. ಭಾರತದಲ್ಲಿ ಮುಂದಿನ ದಿನಗಳಲ್ಲಿ ಕೊರೊನಾ ಭಾರೀ ಸಂಖ್ಯೆಯಲ್ಲಿ ಸ್ಫೋಟಗೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.