Asianet Suvarna News Asianet Suvarna News

ಭಾನುವಾರವೇ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ? ಉದ್ಧವ್‌ ಸರ್ಕಾರ ಪತನಕ್ಕೆ ಕ್ಷಣಗಣನೆ

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಮೈತ್ರಿ ಪಾಳಯದಲ್ಲಿ ಆತಂಕ ನಿರ್ಮಾಣವಾಗಿದೆ. ಇದರೊಂದಿಗೆ ಭಾನುವಾರವೇ ಉದ್ಧವ್ ಆಟ ಕೊನೆಯಾಗುವ ಲಕ್ಷಣಗಳು ಗೋಚರಿಸಿವೆ. 

ಮುಂಬೈ(ಜೂ.24): ಮಹಾರಾ‍ಷ್ಟ್ರದಲ್ಲಿ ಉದ್ಧವ್ ಸರ್ಕಾರ ಉರುಳೋದು ಖಚಿತ. ಭಾನುವಾರವೇ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ. ಈ ಮೂಕ ಕಳೆದ ಎರಡೂವರೆ ವರ್ಷದ ಅಧಿಕಾರದ ಆಟ ಕೊನೆಯಾಗುವ ಸೂಚನೆ ಸಿಕ್ಕಂತಾಗಿದೆ. 

ಕ್ಷಣ ಕ್ಷಣಕ್ಕೂ ಠಾಕ್ರೆ ಬೆಂಬಲಿತ ಶಾಸಕರ ಸಂಖ್ಯೆ ಕುಡಿಯಲಾರಂಭಿಸಿದ್ದು, ಇದು ಶಿವಸೇನೆಗೆ ಮತ್ತಷ್ಟು ನಡುಕ ಉಂಟು ಮಾಡಿದೆ. ರಾಜಕೀಯ ಹೈಡ್ರಾಮಾ ಆರಮಭವಾದ ನಾಲ್ಕನೇ ದಿನ ಶಿಂಧೆ ಬಣದಲ್ಲಿ ಒಟ್ಟು 42 ಶಾಸಕರಿದ್ದರೆ, ಇತ್ತ ಉದ್ಧವ್ ಠಾಕ್ರೆ ಬಣದಲ್ಲಿ ಕೇವಲ 13 ಶಾಸಕರು ಉಳಿದಿದ್ದಾರೆ.