Asianet Suvarna News Asianet Suvarna News

ಮತ್ತೊಂದು ಮಹಾ ಬದಲಾವಣೆಗೆ ಜಮ್ಮು ಕಾಶ್ಮೀರ ಸಜ್ಜು?

ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ಸೇನೆ ಜಮಾವಣೆಯಾಗುತ್ತಿದ್ದು, ಸಾಕಷ್ಟುವದಂತಿ ಮತ್ತು ಕುತೂಹಲಗಳಿಗೆ ದಾರಿ ಮಾಡಿಕೊಟ್ಟಿದೆ. 2019ರಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯುವ ವೇಳೆಯೂ ಇದೇ ರೀತಿಯ ಸೇನಾ ಜಮಾವಣೆ ಆಗಿತ್ತು. ಹೀಗಾಗಿ ಸ್ಥಳೀಯ ರಾಜಕೀಯ ನಾಯಕರು ಮತ್ತು ಜನಸಾಮಾನ್ಯರಲ್ಲಿ ಈ ಸೇನಾ ಜಮಾವಣೆ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ.

ಶ್ಮ್ಮುರೀನಗರ(ಜೂ.08): -ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ಸೇನೆ ಜಮಾವಣೆಯಾಗುತ್ತಿದ್ದು, ಸಾಕಷ್ಟುವದಂತಿ ಮತ್ತು ಕುತೂಹಲಗಳಿಗೆ ದಾರಿ ಮಾಡಿಕೊಟ್ಟಿದೆ. 2019ರಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯುವ ವೇಳೆಯೂ ಇದೇ ರೀತಿಯ ಸೇನಾ ಜಮಾವಣೆ ಆಗಿತ್ತು. ಹೀಗಾಗಿ ಸ್ಥಳೀಯ ರಾಜಕೀಯ ನಾಯಕರು ಮತ್ತು ಜನಸಾಮಾನ್ಯರಲ್ಲಿ ಈ ಸೇನಾ ಜಮಾವಣೆ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ.

ಡ್ರ್ಯಾಗನ್ ಆಟ ನಡೆಯಲ್ಲ, ಬಗ್ಗಲ್ಲ ಭಾರತ, ಚೀನಾಗೆ ಕಲಿಸಲಿದೆ ತಕ್ಕ ಪಾಠ!

ಕೆಲವರು, ಜಮ್ಮುವಿಗೆ ರಾಜ್ಯದ ಸ್ಥಾನಮಾನ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಇನ್ನು ಕೆಲವರು ಕಾಶ್ಮೀರವನ್ನು ಮತ್ತೆ 3 ಭಾಗಗಳಾಗಿ ವಿಂಗಡಿಸಬಹುದು ಎಂಬ ವಾದ ಮಂಡಿಸುತ್ತಿದ್ದಾರೆ. ಇನ್ನು ಕೆಲವರು ಕಾಶ್ಮೀರಿ ಪಂಡಿತರ ದಶಕಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಅವರಿಗೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಕಲ್ಪಿಸಿಕೊಡಬಹುದು ಎಂಬ ವಿಶ್ಲೇಷಣೆಗಳಿಗೂ ಜೀವ ತುಂಬಿದ್ದಾರೆ.