Asianet Suvarna News Asianet Suvarna News
breaking news image

ವಿದೇಶದಲ್ಲಿ ಮೋದಿ ಟೀಕಿಸಿ ರಾಹುಲ್‌ ಗಾಂಧಿ, ವಿದೇಶಾಂಗ ಸಚಿವ ಜೈಶಂಕರ್ ತಿರುಗೇಟು!

ಭಾರತದ ಸ್ಥಿತಿ ಸರಿಯಿಲ್ಲ. ಪ್ರಧಾನಿ ನರೇಂದ್ರ ಮೋದಿ (Narendra Modi) ಯಾರ ಮಾತೂ ಕೇಳುವುದಿಲ್ಲ. ದೇಶಾದ್ಯಂತ ಈಗ ಸೀಮೆಎಣ್ಣೆ ಚೆಲ್ಲಿದೆ. ಬೆಂಕಿ ಹೊತ್ತಿಕೊಳ್ಳಲು ಬೇಕಿರುವುದು ಒಂದು ಕಿಡಿಯಷ್ಟೆ...! ಬ್ರಿಟನ್ನಿನಲ್ಲಿ ಆಯೋಜಿಸಿದ್ದ ‘ಐಡಿಯಾಸ್‌ ಫಾರ್‌ ಇಂಡಿಯಾ’  (Ideas For India) ಶೃಂಗದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಹೇಳಿದ್ದಾರೆ. 

ನವದೆಹಲಿ (ಮೇ. 22): ಭಾರತದ ಸ್ಥಿತಿ ಸರಿಯಿಲ್ಲ. ಪ್ರಧಾನಿ ನರೇಂದ್ರ ಮೋದಿ (Narendra Modi) ಯಾರ ಮಾತೂ ಕೇಳುವುದಿಲ್ಲ. ದೇಶಾದ್ಯಂತ ಈಗ ಸೀಮೆಎಣ್ಣೆ ಚೆಲ್ಲಿದೆ. ಬೆಂಕಿ ಹೊತ್ತಿಕೊಳ್ಳಲು ಬೇಕಿರುವುದು ಒಂದು ಕಿಡಿಯಷ್ಟೆ...! ಬ್ರಿಟನ್ನಿನಲ್ಲಿ ಆಯೋಜಿಸಿದ್ದ ‘ಐಡಿಯಾಸ್‌ ಫಾರ್‌ ಇಂಡಿಯಾ’  (Ideas For India) ಶೃಂಗದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಹೇಳಿದ್ದಾರೆ. ಈ ಮಾತುಗಳು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ವಿದೇಶದ ನೆಲದಲ್ಲಿ ಭಾರತಕ್ಕೆ ರಾಹುಲ್‌ ಗಾಂಧಿ (Rahul Gandhi) ಅವಮಾನ ಮಾಡಿದ್ದಾರೆಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲೂ ರಾಹುಲ್‌ ಮಾತಿಗೆ ಆಕ್ಷೇಪ ವ್ಯಕ್ತವಾಗಿದೆ. ಆದರೆ, ಶಿವಸೇನೆ ರಾಹುಲ್‌ ಗಾಂಧಿ ಸರಿಯಾಗಿಯೇ ಹೇಳಿದ್ದಾರೆ ಎಂದು ಬೆಂಬಲಿಸಿದೆ.

News Hour: ಜ್ಞಾನವಾಪಿ ಮಸೀದಿ ಸರ್ವೆ ತಡೆಗೆ ಸುಪ್ರೀಂ ನಕಾರ: ಜಿಲ್ಲಾ ಕೋರ್ಟ್‌ಗೆ ವಿವಾದ ವರ್ಗಾವಣೆ

ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ (Jai Shankar) ಪ್ರತಿಕ್ರಿಯಿಸಿ, ‘ವಿದೇಶಾಂಗ ಇಲಾಖೆ ತುಂಬಾ ಬದಲಾಗಿದ್ದು, ಅಹಂಕಾರದಿಂದ ವರ್ತಿಸುತ್ತಿದೆ ಎಂದು ರಾಹುಲ್‌ ಹೇಳಿದ್ದಾರೆ. ಆದರೆ ಅದು ಅಹಂಕಾರವಲ್ಲ. ಆತ್ಮವಿಶ್ವಾಸ’ ಎಂದು ಕಿಡಿಕಾರಿದ್ದಾರೆ.

 

Video Top Stories